ಕುಂದಾಪುರ, ಮಾ 01 (DaijiworldNews/MS): ಯುವಕನೋರ್ವ ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ಫೆಬ್ರವರಿ 27 ರಂದು ನಡೆದಿದೆ.
ಕೋಣಿ ಗ್ರಾಮದ ರಘು ಪೂಜಾರಿ ಎಂಬುವವರ ಪುತ್ರ ಶ್ರೀನಿವಾಸ್ (31) ಸಾವನ್ನಪ್ಪಿದ ಯುವಕ.
ಶ್ರೀನಿವಾಸ್ ಎಂಬಿಎ ಪಧವೀಧರನಾಗಿದ್ದು ಕಳೆದ ಎರಡು ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರ ಅಣ್ಣ ಮಂಜುನಾಥ್ ಮನೆಗೆ ಬಂದಿದ್ದರು. ಶ್ರೀನಿವಾಸ್ ಮಲಗಿದ್ದನ್ನು ನೋಡಿ ಎಬ್ಬಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಶ್ರೀನಿವಾಸ್ ಅವರ ದೇಹ ತಣ್ಣಗಾಗಿರುವುದನ್ನು ಗಮನಿಸಿ ತಕ್ಷಣ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಶ್ರೀನಿವಾಸ್ ಆರೋಗ್ಯ ಸಮಸ್ಯೆ ಅಥವಾ ಹೃದಯಾಘಾತದಿಂದಲೋ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಮಂಜುನಾಥ್ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.