ಮಂಗಳೂರು,ಡಿ 16 (MSP): ರಾಜ್ಯ ಕಾರಾಗೃಹ ಇಲಾಖೆ ಎಡಿಜಿಪಿ ಎನ್.ಎಸ್ ಮೇಘರಿಕ್ ಅವರು ಡಿ.15 ರ ಶನಿವಾರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಗರದ ಬಂಧೀಖಾನೆಯಲ್ಲಿ ಅಕ್ರಮ ಗಾಂಜಾ ಪೂರೈಕೆ, ಮೊಬೈಲ್ ಬಳಕೆ , ಚೂರಿ ಇತ್ಯಾದಿ ಆಯುಧ ಗಳ ಸಾಗಾಟ ಮೊದಲಾದ ಪ್ರಕರಣಗಳು ಆಗ್ಗಾಗೆ ವರದಿಯಾಗುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಅಲ್ಲದೆ ಪೊಲೀಸ್ ಭದ್ರತೆ, ಮೊಬೈಲ್ ಜಾಮರ್ , ಸಿಸಿ ಕ್ಯಾಮೆರಾ ಆಳವಡಿಸಿದ್ದರೂ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲವೇಕೆ ಎಂದು ಜೈಲು ಅಧೀಕ್ಷಕ ಪರಮೇಶ್ ಅವರಲ್ಲಿ ಪ್ರಶ್ನಿಸಿದ್ದಲ್ಲದೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಾರಾಗೃಹದಲ್ಲಿ ಅಧಿಕೃತವಾಗಿ 210 ಕೈದಿಗಳಿಗೆ ಸ್ಥಳಾವಕಾಶವಿದ್ದು, ಪ್ರಸ್ತುತ 414 ಬಂಧಿಗಳಿದ್ದಾರೆ. ಇದರಿಂದ ಕೈದಿಗಳ ಅಭಿಪ್ರಾಯ ಪಡೆದುಕೊಂಡರು. ಎಲ್ಲಾ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಬರ್ಕೆ ಇನ್ ಸ್ಪೆಕ್ಟರ್ ಉಮೇಶ್ ಉಪ್ಪರಿಕೆ, ಜೈಲು ಸೂಪರಿಡೆಂಟ್ ಪರಮೇಶ್, ಜೈಲರ್ ಗಳು ಉಪಸ್ಥಿತರಿದ್ದರು.