ಮಂಗಳೂರು, ಫೆ. 28 (DaijiworldNews/SM): ಸುರತ್ಕಲ್ ಟೋಲ್ ಸಮಸ್ಯೆ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಈ ಬಗ್ಗೆ ಕೆಲವೊಂದು ಕಾನೂನಾತ್ಮಕ ತೊಡಕುಗಳಿವೆ. ಇದರ ಬಗ್ಗೆ ಶೀಘ್ರ ಒಂದು ಸಭೆ ಕರೆಯುತ್ತೇನೆ ಹಾಗೂ ಪರಿಹಾರ ಕಂಡುಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ವಿವಿಧ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ನನಗೆ ಈ ಮನವಿ ಬಂದಿದೆ. ಆದರೆ, ಸದ್ಯ ಕಾನೂನಾತ್ಮಕ ತೊಡಕುಗಳಿರುವುದರಿಂದ ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಹಾಗೂ ಆ ಸಭೆಗೆ ಸಂಸದ ನಳಿನ್ ಅವರನ್ನು ಕೂಡ ಆಹ್ವಾನಿಸಲಾಗಿದು ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಇದಕ್ಕೊಂಡು ಸೂಕ್ತ ಪರಿಹಾರ ಒದಗಿಸಲಾಗುವುದೆಂದು ಭರವಸೆ ನೀಡಿದ್ದಾರೆ.
ಇನ್ನು ಮಂಗಳೂರಿಗೆ ರಿಂಗ್ ರೋಡ್ ಕಾಮಗಾರಿಗೆ ಬೇಡಿಕೆ ಇದೆ. ಈ ಬಗ್ಗೆ ಡಿಪಿಆರ್ ಸಿದ್ದತೆಗೆ ಸೂಚನೆ ನೀಡಲಾಗಿದೆ. ಮುಂಬಯಿ ಕನ್ಯಾಕುಮಾರಿ ಎಕ್ಸ್ ಪ್ರೆಸ್ ಹೈವೆಗೆ ಕಾಮಗಾರಿ ಸಿದ್ದವಾಗಿದೆ. ಇದಕ್ಕೆ ಮೂಲ ರಸ್ತೆ ಮಂಗಳೂರಾಗಿದೆ. ಈ ಕಾಮಗಾರಿಯಿಂದ ಮಂಗಳೂರು ಉದ್ಯಮ ರಂಗ ಅಭಿವೃದ್ಧಿ ಕಾಣಲಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಪೂಣೆ ಬೆಂಗಳೂರು ಹೆದ್ದಾರಿ ಕಾಮಗಾರಿ ಯೋಜನೆ ಪ್ರಗತಿಯಲ್ಲಿದೆ. ಈ ಕಾಮಗಾರಿ ಆದಲ್ಲಿ ಪೂಣೆಯಿಂದ ಬೆಂಗಳೂರಿಗೆ ಮೂರು ಗಂಟೆಯಲ್ಲಿ ಸಂಪರ್ಕ ಸಾಧ್ಯವಾಗಲಿದೆ. ಚೆನೈ ಬೆಂಗಳೂರು ಕಾಮಗಾರಿ ಆರಂಭವಾಗಿದೆ ಈ ವರ್ಷ ಉದ್ಘಾಟನೆಗೊಳಲ್ಲಿದೆ ಎಂದರು.