ಕಾಸರಗೋಡು, ಫೆ. 28 (DaijiworldNews/SM): ಜಿಲ್ಲೆಯಲ್ಲಿ ಸೋಮವಾರ 33 ಮಂದಿಗೆ ಕೊರೋನ ಸೋಂಕು ದೃಢ ಪಟ್ಟಿದ್ದು, 97 ಮಂದಿ ಗುಣಮುಖರಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 439 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಪ್ರಸ್ತುತ 2,317 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ 1,66,114 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 1,64,259 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಮೃತ ಪಟ್ಟವರ ಸಂಖ್ಯೆ 1,204 ಕ್ಕೇರಿಕೆಯಾಗಿದೆ.