ಉಡುಪಿ, ಫೆ 27 (DaijiworldNews/HR): ಉಕ್ರೇನ್ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಗೆ ಸೇರಿದ ಒಟ್ಟು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಇಬ್ಬರು ಇದೀಗ ರೊಮೇನಿಯಾ ಗಡಿಯ ಮೂಲಕ ಉಕ್ರೇನ್ ತೊರೆದಿದ್ದು, ಒಬ್ಬರು ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯಾವರದ ಮೃಣಾಲ್ ಈಗಾಗಲೇ ರೊಮೇನಿಯಾ ತಲುಪಿದ್ದು ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅವರು ಸಂಜೆ 6:00 ಗಂಟೆ ಸುಮಾರಿಗೆ ದೆಹಲಿ ತಲುಪಲಿದ್ದಾರೆ.
ಇನ್ನು ಪರ್ಕಳ ನಿವಾಸಿ ಬಿ ವಿ ರಾಘವೇಂದ್ರ ಅವರ ಪುತ್ರ ನಿಯಮ್ ರಾಘವೇಂದ್ರ(20) ಅವರು ಕೂಡ ರೊಮೇನಿಯಾ ಗಡಿ ದಾಟಿದ್ದು, ಅಲ್ಲಿಂದ ಶೀಘ್ರವೇ ಭಾರತದತ್ತ ಪ್ರಯಾಣ ಬೆಳೆಸಲಿದ್ದಾರೆ.
ಇನ್ನುಳಿದ ಐವರು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸುರಕ್ಷಿತವಾಗಿದ್ದು, ದೇಶ ತೊರೆಯುವ ಬಗ್ಗೆ ಮಾಹಿತಿಗಾಗಿ ಕಾಯುತಿದ್ದಾರೆ.
ಕೆಮ್ಮಣ್ಣುವಿನ ಗ್ಲೆನ್ವೆಲ್ ಫೆರ್ನಾಂಡಿಸ್, ಕಲ್ಯಾಣಪುರದ ಅನಿಫ್ರೆಡ್ ರಿಡ್ಲಿ ಡಿಸೋಜಾ, ಬ್ರಹ್ಮಾವರದ ರೋಹನ್ ಧನಂಜಯ್ ಬಾಗ್ಲಿ, ನಂದಿನಿ ಅರುಣ್ ಮತ್ತು ಅಂಕಿತಾ ಪೂಜಾರಿ ಇನ್ನೂ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ.