ಮಣಿಪಾಲ,ಫೆ 26 (DaijiworldNews/HR): ಮುಂಬೈನಿಂದ ರೈಲಿನಲ್ಲಿ ಬಂದಿದ್ದ ರಾಯಗಢದ ಪಿಂಟೋ ಪೌಲ್ ಎಂಬವರು ಉಡುಪಿ ರೈಲ್ವೇ ನಿಲ್ದಾಣದಲ್ಲಿ ಪೋನ್ ಚಾರ್ಜ್ ಹಾಕಿದಲ್ಲಿಂದ ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡಿ ಓಡಿ ಹೋಗುವಾಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ರೈಲ್ವೇ ಪೊಲೀಸರು ಕಳ್ಳರನ್ನು ಹಿಡಿರುವ ಘಟನೆ ನಡೆದಿದೆ.
ವಶಕ್ಕೆ ಪಡೆದಿರುವ ಆರೋಪಿಗಳನ್ನು ಬಿಹಾರದ ಶಹಬುದ್ದೀನ್ ಮತ್ತು ತನ್ವೀರ್ ಅಲಾಮ್ ಎಂದು ಗುರುತಿಸಲಾಗಿದೆ.
ಇನ್ನು ಪೊಲೀಸರು ಹಾಗೂ ರೈಲ್ವೇ ಪೊಲೀಸರು ಮಣಿಪಾಲ ಪೊಲೀಸ್ ಠಾಣೆಗೆ ಮೊಬೈಲ್ ಪೋನ್ ಸಮೇತ ಆರೋಪಿಗಳನ್ನು ಹಿಡಿದು ತಂದಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.