ಕಾಸರಗೋಡು, ಫೆ 26 (DaijiworldNews/HR): ಜಿಲ್ಲೆಯಲ್ಲಿ ಶನಿವಾರ 63 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 121 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 513 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 2,843 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 1,66,051 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 1,63, 581 ಮಂದಿ ಗುಣಮುಖರಾಗಿದ್ದಾರೆ.