ಉಡುಪಿ, ಫೆ. 25 (DaijiworldNews/SM): ವಿದ್ಯಾಭ್ಯಾಸಕ್ಕೆಂದು ಹದಿನೈದು ದಿನಗಳ ಹಿಂದೆ ಉಕ್ರೇನ್ ಗೆ ತೆರಳಿದ್ದ ಯುವಕನೋರ್ವ ಸಿಲುಕಿಕೊಂಡಿರುವ ಘಟನೆ ನಡೆದಿದ್ದು, ಆತನ ಬರುವಿಕೆಗಾಗಿ ಕುಟುಂಬಸ್ಥರು ಎದುರು ನೋಡುತ್ತಿದ್ದಾರೆ. ಗ್ಲೆನ್ ವೀಲ್ ಮೆಕ್ಲಿನ್ ಫೆರ್ನಾಂಡಿಸ್ ಎಂಬ ಯುವಕ ಸದ್ಯ ಉಕೇನ್ ನಲ್ಲಿದ್ದಾನೆ.
ಕೇವಲ 15 ದಿನಗಳ ಹಿಂದೆಯಷ್ಟೆ ವಿದ್ಯಾಭ್ಯಾಸಕ್ಕಾಗಿ ಆತ ಉಕ್ರೇನ್ ಗೆ ತೆರಳಿದ್ದ. ಉಕ್ರೇನ್ ಗೆ ಹೊರಡುವ ಮುನ್ನ ಸಹಪಾಠಿಗಳೊಂದಿಗೆ ಫೇರ್ ವೆಲ್ ಪಾರ್ಟಿ ಮಾಡಿದ್ದ. ಫೇರ್ ವೆಲ್ ಪಾರ್ಟಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಇಂದು ತಂದೆ ತಾಯಿಯ ಜೊತೆಗೆ ಮಾತುಕತೆ ನಡೆಸಿದ್ದಾನೆ. ಸುರಕ್ಷಿತವಿರುವುದಾಗಿ ಮಾಹಿತಿ ನೀಡಿದ್ದಾನೆ.
ಶೀಘ್ರವೇ ಸುರಕ್ಷಿತವಾಗಿ ಭಾರತಕ್ಕೆ ಮರಳುವ ನಿರೀಕ್ಷೆಯಲ್ಲಿ ಕುಟುಂಬ ಸದಸ್ಯರಿದ್ದಾರೆ.