ಮಂಗಳೂರು, ಫೆ 25 (DaijiworldNews/MS): ಕೇರಳಕ್ಕೆ ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಜಾಲ ಪತ್ತೆ ಹಚ್ಚಿ , ಮೂವರು ಆರೋಪಿಗಳನ್ನು ಕೊಣಾಜೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಮೀರ್ (39), ಮೊಹಮ್ಮದ್ ಫರ್ವೇಜ್ (40) ಮತ್ತು ಮೊಹಮ್ಮದ್ ಅನ್ಸಿಫ್ ( 38)ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಲ್ಲರೂ ಉಪ್ಪಳ ನಿವಾಸಿಗಳಾಗಿದ್ದಾರೆ. ಖಚಿತ ಮಾಹಿತಿ ಬೇರೆಗೆ ಕೊಣಾಜೆಯಲ್ಲಿ ವಿಶ್ವವಿದ್ಯಾನಿಲಯ ಬಳಿ ಬಂಧಿಸಲಾಗಿದೆ.
ಬಂಧಿತರಿಂದ 3.60 ಲಕ್ಷ ಮೌಲ್ಯದ 60 ಗ್ರಾಂ ಎಂಡಿಎಂಎ, ಕಾರು, ಡಿಜಿಟಲ್ ತೂಕದ ಯಂತ್ರ, 2 ಸ್ಟ್ರೋಕ್ ಟ್ಯೂಬ್, ಒಂದು ಲೈಟರ್ ಸೇರು ಒಟ್ಟು 8.60 ಲಕ್ಷ ರೂ. ಸೊತ್ತು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ವ್ಯಕ್ತಿಯಿಂದ ಡ್ರಗ್ಸ್ ಪಡೆದಿದ್ದು, ಡ್ರಗ್ಸ್ ದಂಧೆಯ ಹಿಂದಿರುವ ಬೆಂಗಳೂರಿನವರನ್ನೂ ಪತ್ತೆ ಮಾಡುವುದಾಗಿ ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.