ಕುಂದಾಪುರ, ಅ 19: ಕಳೆದ ಹತ್ತು ವರ್ಷಗಳಿಂದ ಪ್ರೀತಿಸಿ ರಿಜಿಸ್ಟೇಶನ್ ಮದುವೆಯಾದ ಎರಡು ದಿನದಲ್ಲಿ , ನಾಪತ್ತೆಯಾದವನ್ನು ಹುಡುಕಿಕೊಡುವಂತೆ ಆಗ್ರಹಿಸಿ ಯುವತಿಯೋರ್ವಳು ಹುಡುಗನ ಮನೆಯ ಮುಂದೆ ಕುಟುಂಬಸ್ಥರೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಸ್ವಚ್ಚತೆಯ ಕೆಲಸ ಮಾಡಿಕೊಂಡಿದ್ದ ಲಲಿತಾ ಹಾಗೂ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಮಂಜುನಾಥರ ನಡುವೆ ಪ್ರೇಮಾಕುಂರವಾಗಿತ್ತು. ಕಳೆದ ಹತ್ತು ವರ್ಷಗಳಿಂದ ನಂತರ ಲಲಿತಾ ಆ ಆಸ್ಪತ್ರೆಯ ಕೆಲಸ ಬಿಟ್ಟು ಬೇರೊಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ ಬಳಿಕವೂ ಅಲ್ಲಿಗೆ ಬಂದು ಹೋಗುತ್ತಿದ್ದ. ಲಲಿತಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಂದರ್ಭ ಮನೆಯಿಂದ ಊಟವನ್ನೂ ತಂದು ಕೊಡುತ್ತಿದ್ದ. ದೇವಸ್ಥಾನ, ಪಾರ್ಕ್ ವಿವಿಧ ಕಡೆ ಸುತ್ತಾಡಿದ್ದ. ಕೆಲವು ತಿಂಗಳ ಹಿಂದೆ ಇವರಿಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಕೆಲವೇ ತಿಂಗಳಲ್ಲಿ ಮದುವೆಯಾಗುತ್ತೇನೆ ಎಂದು ಹೇಳಿದವನು ನಾಪತ್ತೆಯಾದ ಹಿನ್ನೆಲೆ ಶಂಕರನಾರಾಯಣ ಠಾಣೆಯಲ್ಲಿ ಲಲಿತಾ ದೂರು ನೀಡಿದ್ದಳು. ಮಂಜುನಾಥನನ್ನು ಕರೆಸಿದ ಪೊಲೀಸರು ಮಾತುಕಥೆ ನಡೆಸಿ, ಸೆ.೨೫ರಂದು ರಿಜೀಸ್ಟರ್ ಮ್ಯಾರೇಜ್ ಮಾಡಿಸಿದ್ದರು. ರಿಜೀಸ್ಟರ್ ಮ್ಯಾರೆಜ್ ಆದ ಎರಡು ದಿನಗಳ ಬಳಿಕ ಮನೆಗೆ ಬಂದ ಮಂಜುನಾಥ್ ತನ್ನ ಮನೆಯಲ್ಲಿ ಮದುವೆ ಆಗಿರುವ ಕುರಿತು ಪ್ರಸ್ತಾಪಿಸಿದ್ದಾನೆ. ಈ ಸಂದರ್ಭ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಅಂದಿನಿಂದ ನಾಪತ್ತೆಯಾದವನು ಇಲ್ಲಿಯವರೆಗೆ ಪತ್ತೆಯಾಗಿಲ್ಲ.
ಅ.6ರಂದು ಮದುವೆ ನಿಗದಿ
ಅ.6 ರಂದು ಅಂಪಾರಿನ ಶ್ರೀ ವಾಸುಕಿ ಸುಬ್ರಹ್ಮಣ್ಯ ಮತ್ತು ನಾಗಯಕ್ಷಿ ದೇವಸ್ಥಾನದಲ್ಲಿ ಲಲಿತಾ ಮತ್ತು ಮಂಜುನಾಥನ ಮದುವೆ ನಿಗದಿಗೊಳಿಸಲಾಗಿತ್ತು. ಲಲಿತಾರ ಕುಟುಂಬಸ್ಥರು ಮತ್ತು ಸ್ನೇಹಿತರು, ತಾನು ಕೆಲಸ ಮಾಡುತ್ತಿರುವ ಆಸ್ಪತ್ರೆಯ ಸಿಬ್ಬಂದಿಗಳೂ ಕೂಡ ಮದುವೆ ಸಮಾರಂಭಕ್ಕೆಂದು ಬಂದಿದ್ದರು. ಆದರೆ ಮದುಮಗ ಮಂಜುನಾಥ್ ಮಾತ್ರ ಮದುವೆ ಮಂಟಪಕ್ಕೆ ಬರಲೇ ಇಲ್ಲ. ಇದರಿಂದ ಮನನೊಂದ ಲಲಿತಾ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದೇವು ಎಂದು ತನ್ನ ದುಃಖವನ್ನ ಮಾಧ್ಯಮಗಳ ಮುಂದೆ ತೋಡಿಕೊಂಡಳು.
ಗಂಡನ ಮನೆ ಮುಂದೆ ಧರಣಿ
ಈ ಸಂದರ್ಭ ಲಲಿತಾ ಗಂಡನ ಮನೆ ಮುಂದೆ ಧರಣಿ ಮಾಡುವ ನಿರ್ಧಾರ ಕೈಗೊಂಡ. ತನ್ನ ಕುಟುಂಬದವರೊಂದಿಗೆ ತನಗೆ ನ್ಯಾಯ ಕೊಡಿ ಎಂದು ಅಂಗಲಾಚಿದ್ದಾಳೆ. ಮದುವೆಗೆಂದು ಪ್ರಿಂಟ್ ಮಾಡಿದ ಬ್ಯಾನೆರ್ ಮತ್ತು ಆಮಂತ್ರಣ ಪತ್ರಿಕೆ ಹಿಡಿದು ನನ್ನ ನ್ಯಾಯ ಕೊಡುವಂತೆ ಆಗ್ರಹಿಸಿದ್ದಾಳೆ.
ಸ್ಥಳಕ್ಕೆ ಬಂದ ಪೊಲೀಸರು ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಈ ಕುರಿತು ಮಾತುಕತೆ ನಡೆಸುವ ಇಲ್ಲಿ ಮನೆಯ ಮುಂದೆ ಗಲಾಟೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದರೂ ಲಲಿತಾಳ ಕುಟುಂಬಿಕರು ಹಠವಿಡಿದು ಕುಳಿತ್ತಿದ್ದಾರೆ. ನನಗೆ ನ್ಯಾಯ ಬೇಕೆ ಬೇಕು ಆಗ್ರಹಿಸಿದರು.
ಮಂಜುನಾಥ್ ಕುಟುಂಬಸ್ಥರೊಂದಿಗೆ ವಾಗ್ವಾದ
ಈ ಸಂದರ್ಭ ಸ್ಥಳದಲ್ಲಿದ್ದ ಮಂಜುನಾಥ್ನ ಭಾವ ಚಂದ್ರ ಮತ್ತು ಲಲಿತಾ ಮತ್ತು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಲಲಿತಾ ಮಂಜುನಾಥ್ ಎಲ್ಲೂ ನಾಪತ್ತೆಯಾಗಿಲ್ಲ ನೀವೆ ಅವನನ್ನ ಅಡಗಿಸಿಟ್ಟಿದ್ದಿರಿ ಎಂದು ಆರೋಪಿಸಿದರು. ಕೆಲ ಕಾಲ ಲಲಿತಾ ಕುಟುಂಬಸ್ಥರು ಮತ್ತು ಮಂಜುನಾಥ್ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಬಂದ ಕುಂದಾಪುರ ಠಾಣಾ ಸಿಬ್ಬಂದಿಗಳು ಅವರನ್ನ ಸ್ಥಳದಿಂದ ದೂರ ಕಳುಹಿಸಿದರು. ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಇತ್ಯರ್ಥಗೊಳಿಸುವ ಎಂದು ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಮಂಜುನಾಥ್ ಬರುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಮನೆಯಿಂದ ಅನತಿ ದೂರದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ನಂತರ ಮಂಜುನಾಥ್ ನಾಪತ್ತೆಯಾದ ಕುರಿತು ಕುಂದಾಪುರ ಠಾಣೆಯಲ್ಲಿ ನಾಪತ್ತೆಯಾದ ದೂರು ದಾಖಲಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಕಳೆದ ಹತ್ತು ವರ್ಷಗಳಿಂದ ನಾನು ಮತ್ತು ಮಂಜುನಾಥ್ ಪ್ರೀತಿ ಮಾಡುತ್ತಾ ಇದ್ದೇವೆ. ಮದುವೆಯಾಗುತ್ತೇನೆ ಎಂದು ಸಮಯ ಕೇಳಿ ಹೋದವರು ನಾಪತ್ತೆಯಾದರೂ ಇದರಿಂದ ಭಯಗೊಂಡ ನಾನು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದೆ. ನಂತರ ಮೂರು ದಿನಗಳಲ್ಲಿ ನಾವು ವಿವಾಹ ನೋಂದಾವಣೆ ಮಾಡಿಸಿಕೊಂಡೆವು. ನಂತರ ಅ.6ರಂದು ಮದುವೆ ದಿನಾಂಕ ನಿಗದಿಗೊಳಸಿದ ಅವರು ಮದುವೆ ದಿನ ಮದುವೆ ಮಂಟಪಕ್ಕೆ ಬರದೆ ನಾಪತ್ತೆಯಾಗಿದ್ದಾರೆ. ನನ್ನ ಗಂಡನನ್ನ ಹುಡುಕಿಕೊಡಿ ಎಂದು ನಾನು ಪ್ರತಿಭಟನೆಗೆ ಕುಳಿತಿದ್ದೇನೆ. ಅವರು ಬರುವ ವರೆಗೂ ನಾನು ಇಲ್ಲಿಂದ ಕದಲುವುದಿಲ್ಲ. - ಲಲಿತಾ, ಸಂತ್ರಸ್ಥೆ.
ಮಂಜುನಾಥ್ಗೆ ಇಷ್ಟವಿಲ್ಲದೆ ಮದುವೆ ಮಾಡಿಸಿದ್ದಾರೆ. ಈ ಬಗ್ಗೆ ನನ್ನ ಬಳಿ ದುಃಖ ತೋಡಿಕೊಂಡಿದ್ದ. ನಾನು ಕುಂದಾಪುರ ಠಾಣೆಗೆ ಹೋಗಿ ಅಂದಿನ ಪಿಎಸೈ ನಾಸೀರ್ ಹುಸೇನ್ ಜೊತೆ ಮಾತುಕತೆ ನಡೆಸಿದಾಗ ಮದುವೆಯಾಗಿದೆ. ಏನು ಮಾಡಲಾಗುವುದಿಲ್ಲ ಎಂದರು. ನಂತರ ಅಲ್ಲಿಂದ ಹೊರ ಬಂದವನು ಐದು ನಿಮಿಷದಲ್ಲಿ ವಾಪಾಸು ಬರುತ್ತೇನೆಂದು ತೆರಳಿದವನು ಇಂದಿನವರೆಗೆ ಬಂದಿಲ್ಲ. ನಾವು ಹುಡುಕುವ ಪ್ರಯತ್ನ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಬರದೆ ಹೋದಲ್ಲಿ ಪೊಲೀಸ್ ಕಂಪ್ಲೆಟ್ ನೀಡುವ ಕುರಿತು ಯೋಚಿಸಿದ್ದೇವು - ಚಂದ್ರ, ನಾಪತ್ತೆಯಾದ ಮಂಜುನಾಥ್ನ ಭಾವ