ಉಡುಪಿ, ಫೆ 24 (DaijiworldNews/MS): ಕಾರ್ಕಳದ ಜೋಡುರಸ್ತೆಯ ಪ್ರೈಮ್ ಮಾಲ್ ನ ಎರಡನೇ ಮಹಡಿಯಲ್ಲಿ ಅತೀ ಶೀಘ್ರದಲ್ಲಿ ಆರಂಭಗೊಳ್ಳಲಿರುವ ಪೂರ್ಣಿಮಾ ಲೈಫ್ ಸ್ಟೈಲ್ ನಲ್ಲಿ ಫೆಬ್ರವರಿ 21 ರಂದು ಲಕ್ಷ್ಮೀ ಪೂಜೆ ನಡೆಯಿತು.
ಕಾರ್ಕಳದಲ್ಲಿ ಬಟ್ಟೆ ಬರೆಗಳಿಗೆ ಮನೆಮಾತಾಗಿರುವ ಪೂರ್ಣಿಮಾ ಸಿಲ್ಕ್ಸ್ ನವರ ವಿನೂತನ ಮಳಿಗೆ ಪೂರ್ಣಿಮಾ ಲೈಫ್ ಸ್ಟೈಲ್ ಇದೇ ಬರುವ ಮಾರ್ಚ್ 10 ರಂದು ಕಾರ್ಕಳದ ಪ್ರೈಮ್ ಮಾಲ್ ನ ಎರಡನೇ ಮಹಡಿಯಲ್ಲಿ ಶುಭಾರಂಭಗೊಳ್ಳಿದೆ.
ಶುಭಾರಂಭಕ್ಕೂ ಮುನ್ನ ನಡೆದ ಲಕ್ಷ್ಮೀ ಪೂಜೆಯಲ್ಲಿ ಇಂಧನ, ಕನ್ನಡ, ಮತ್ತು ಸಂಸ್ಕ್ರತಿ ಸಚಿವ ವಿ. ಸುನಿಲ್ ಕುಮಾರ್ ಭಾಗವಹಿಸಿದರು.
ನೂತನ ಪೂರ್ಣಿಮಾ ಲೈಫ್ ಸ್ಟೈಲ್ ಮಳಿಗೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮೆನ್ಸ್, ವಿಮೆನ್ಸ್, ಎಥ್ನಿಕ್ ವೇರ್ ಬಟ್ಟೆಗಳ ಜೊತೆಗೆ ಚೈನಿಸ್, ನಾರ್ತ್ ಇಂಡಿಯನ್, ವೆಜಿಟೇರಿಯನ್ ಪುಡ್ ಕೋರ್ಟ್, 8 ಸಾವಿರ ಚದರಡಿಯ ವಿಶಾಲ ವಿಸ್ಕೃತವಾಗಿ ಒಂದೇ ಸೂರಿನಡಿಯಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ನೂತನ ಮಳಿಗೆಯನ್ನು ಸಚಿವ ವಿ ಸುನಿಲ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಹೆಗ್ಗಡೆ ಮತ್ತು ತುಳು ಚಿತ್ರ ನಟ ಅರವಿಂದ್ ಬೋಳಾರ್ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಪಾಲುದಾರರಾದ ರವಿಪ್ರಕಾಶ್ ಪ್ರಭು, ಕಿರಣ ರವಿಪ್ರಕಾಶ್ ಪ್ರಭು ಮತ್ತು ಪ್ರಜ್ವಲ್ ಪ್ರಭು ತಿಳಿಸಿದ್ದಾರೆ.