ವಿಟ್ಲ, ಫೆ 24 (DaijiworldNews/MS): ವ್ಯಕ್ತಿಯೋರ್ವರು ತನ್ನ ಮಗನನ್ನೇ ಹೊಡೆದು ಕೊಲೆಗೈದ ಘಟನೆ ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ಫೆ.23ರಂದು ರಾತ್ರಿ ನಡೆದಿದೆ.
ವಿಟ್ಲ ಮುಡ್ನೂರು ಗ್ರಾಮದ ಕಾಂತಮೂಲೆ ನಿವಾಸಿ ದಿನೇಶ್(40)ರವರು ಕೊಲೆಯಾದವರು.ಅವರ ತಂದೆ ವಸಂತ ಗೌಡ ಪ್ರಕರಣದ ಆರೋಪಿಯಾಗಿದ್ದಾರೆ.
ಕಾಂತಮೂಲೆಯ ಮನೆಯಲ್ಲಿ ತಂದೆ, ಮಗ ಮಾತ್ರವೇ ವಾಸವಾಗಿದ್ದು, ಮೃತ ದಿನೇಶನು ಪ್ರತಿ ದಿನ ಅಮಲು ಪದಾರ್ಥ ಸೇವಿಸಿ ಮನೆಗೆ ತಂದೆಯಲ್ಲಿ ಗಲಾಟೆ ಮಾಡುತ್ತಿದ್ದು ಇದರಿಂದ ತಂದೆ ವಸಂತ ಗೌಡ ಅದೇ ಕೋಪದಿಂದ ಫೆ.23ರಂದು ರಾತ್ರಿ ಕೊಡಲಿಯ ಮರದ ಹಿಡಿಯಿಂದ ದಿನೇಶನ ತಲೆ ಹಾಗೂ ಮುಖದ ಭಾಗಕ್ಕೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ತೀವ್ರ ತರಹದ ಗಾಯವುಂಟಾಗಿ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಮೃತ ದಿನೇಶ ಸಹೋದರ ಎಮ್. ವಿ ಮುರಳಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.