ಮಂಗಳೂರು, ಫೆ 23 (DaijiworldNews/HR): ಉಳ್ಳಾಲ ಉರೂಸ್ ನಡೆಯುತ್ತಿದ್ದ ಜಾಗದಲ್ಲಿ ಹಾಕಲಾಗಿದ್ದ ಮಿನಿ ಜೈಂಟ್ ವೀಲ್ ಅಪಘಾತಕ್ಕೀಡಾಗಿದೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನು ಉಮ್ಮರ್ ಫಾರೂಕ್ (42), ಮೊಹಮ್ಮದ್ ತಯ್ಯಬ್ (7), ಮಶಿತಾ (18), ನೂರ್ಜಾನ್ (36), ಸಲೀಕಾ (28) ಮತ್ತು ಸಮೀರ್ (41) ಎಂದು ಗುರುತಿಸಲಾಗಿದೆ.
ಗಾಯಗೊಂಡವರೆಲ್ಲರೂ ಉಳ್ಳಾಲದ ಅಲೇಕಲ ಮೂಲದವರು ಎಂದು ತಿಳಿದು ಬಂದಿದೆ.