ಮಂಗಳೂರು, ಫೆ 22 (DaijiworldNews/MS): ಕೂಳೂರು ಸಮೀಪದ ಪಂಜಿನಮೊಗರು - ಉರುಂದಾಡಿ ಗುಡ್ಡೆಯಲ್ಲಿ ಪ್ರಾರ್ಥನಾ ಮಂದಿರ ದ್ವಂಸ ಪ್ರಕರಣದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಕಾವೂರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಬಜಪೆ ನಿವಾಸಿ ಲತೀಶ್ (25) , ಕಾವೂರು ಉರುಂದಾಡಿ ನಿವಾಸಿ ಧನಂಜಯ (36) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ತಿಳಿಸಿದ್ದಾರೆ.