ಮಂಗಳೂರು, ಫೆ 21 (DaijiworldNews/HR): ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರಿಕ್ಷಾ ಸಹಿತ ಬಂಧಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಅಬ್ದುಲ್ ಹಕೀಂ(45) ಎಂದು ಗುರುತಿಸಲಾಗಿದೆ.
ಆರೋಪಿಯಿಂದ 40,300ರೂ. ಮೌಲ್ಯದ 4 ಕೆ.ಜಿ 150 ಗ್ರಾಂ ಗಾಂಜಾ ಹಾಗೂ 120000 ಮೌಲ್ಯದ 20 ಗ್ರಾಂ MDMA ಮತ್ತು 125000ರೂ. ಮೌಲ್ಯದ ಆಟೋರಿಕ್ಷಾ, 13,000 ಮೌಲ್ಯದ 2 ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು,ವಶಕ್ಕೆ ಪಡೆದುಕೊಂಡ ಸೊತ್ತುಗಳ ಒಟ್ಟೂ ಮೌಲ್ಯ 2,98,300ರೂ. ಎಂದು ಅಂದಾಜಿಸಲಾಗಿದೆ.
ಇನ್ನು ಆರೋಪಿ ಅಬ್ದುಲ್ ಹಕೀಂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಈತನ ವಿರುದ್ದ ಈಗಾಗಲೇ 20 ಪ್ರಕರಣಗಳು ದಾಖಲಾಗಿದೆ.