Karavali
ಮಾ.10 ರಿಂದ ಕಾರ್ಕಳ ಉತ್ಸವ: 'ಆರ್ಥಿಕ ಚಟುವಟಿಕೆ ಗರಿಕೆದರಿಕೆ' -ಸಚಿವ ವಿ.ಸುನೀಲ್ಕುಮಾರ್
- Mon, Feb 21 2022 02:14:22 PM
-
ಕಾರ್ಕಳ, ಫೆ 21 (DaijiworldNews/MS): ಕಾರ್ಕಳ ಉತ್ಸವದ ಮೂಲಕ ಆರ್ಥಿಕ ಚಟುವಟಿಕೆ ಗರಿಕೆದರಲಿದೆ. ತನ್ಮೂಲಕ ಬಾಷೆ, ಸಂಸ್ಕೃತಿ ಕಲೆಯ ಉತ್ಸವವಾಗಿ ಮೇಳೈಸಲಿದೆ. ಕಾರ್ಕಳ ಉತ್ಸವವು ನಾಡಿನ ಉತ್ಸವವಾಗಿ ಮೂಡಿಬರಲಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಮಾರ್ಚ್ 10ರಿಂದ 20ರ ತನಕ ಕಾರ್ಕಳದಲ್ಲಿ ಜರಗಲಿರುವ ಕಾರ್ಕಳ ಉತ್ಸವದ ಪ್ರಯುಕ್ತ ಸೋಮವಾರದಂದು ಸ್ವರಾಜ್ ಮೈದಾನದಲ್ಲಿ ಕಾರ್ಕಳ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೋವಿಡ್ ಮೂರನೇ ಅಲೆ ಕಾಡಿರುವುದರಿಂದ ಹಿಂದೆ ನಿಗದಿ ಪಡಿಸಿದ ಕಾರ್ಯಕ್ರಮ ಮೂಂದೂಡಲಾಗಿತ್ತು. ಕಾರ್ಕಳ ಉತ್ಸವ ಬೇಕೆಂದು ನಾಗರಿಕರಲ್ಲಿ ಕಾಡಿದ್ದು, ನಮಗೂ ಅದು ಬೇಕೆಂದು ಕಾಡಿತು. ಹತ್ತು ದಿನಗಳ ಉತ್ಸವದಲ್ಲಿ 33 ವಿಭಾಗಗಳು ಒಳಗೊಂಡಿದೆ. ಇನ್ನಷ್ಟು ವಿಭಾಗಗಳ ಸೇರ್ಪಡೆಗೊಳ್ಳಲಿದೆ. ಉತ್ಸವವು ಮೂರು ಹಂತಗಳಗಿದೆ. 10ರಿಂದ 17ರತನಕ ಏಳು ದಿನಗಳ ಕಾಲ ಗಾಂಧಿ ಮೈದಾನದಲ್ಲಿ ಉತ್ಸವ ಜರಗಲಿದೆ. ಯಕ್ಷರಂಗಾಯಣದ ಗುದ್ದಲಿ ಪೂಜೆ ಅದೇ ದಿನ ಜರಗಲಿದ್ದು, ಹೆಲಿಕಾಪ್ಟರ್ನಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆ ಚಾಲನೆ ದೊರಕಲಿದೆ.
ಮಾರ್ಚ್ ೧೮ರಂದು ಉತ್ಸವ ಮೆರವಣಿಗೆ
ನೂರಾರು ಕಲಾ ತಂಡಗಳು ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಅಮೃತ ಮಹೋತ್ಸವ ಅಂಗವಾಗಿ ಪ್ರತಿ ತಂಡದಲ್ಲಿ 75 ಮಂದಿ ಕಲಾವಿದರು ಭಾಗವಹಿಸಲಿದ್ದಾರೆ. ಸುಮಾರು 10ಸಾವಿರ ಮಂದಿ ಕಲಾವಿದರು ಉತ್ಸವದ ಮೆರಗು ನೀಡಲಿದ್ದಾರೆ. ಬಂಡಿಮಂಠದಿಂದ ಆರಂಭಗೊಂಡು ಸ್ವರಾಜ ಮೈದಾನದ ವರೆಗೆ ರಸ್ತೆ ಮೆರವಣಿಗೆ ನಡೆಯಲಿದ್ದು, ರಸ್ತೆಯ ಇಕ್ಕೆಲೆಗಳಲ್ಲಿ ನಿಂತಿರುವ ನಾಗರಿಕರು ಉತ್ಸವಕ್ಕೆ ಸ್ವಾಗತಿಸಿ, ಆಸ್ವಾದಿಸಲಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ೪೬ ಸಾವಿರ ಕುಟುಂಬಗಳು ಇದ್ದು, ಪ್ರತಿ ಕುಂಟುಂಬದಿಂದ ಓರ್ವ ಸದಸ್ಯನಾದರೂ ಪಾಲ್ಗೊಳ್ಳುವ ಮೂಲಕ ಉತ್ಸವದಲ್ಲಿ ಕೈಜೋಡಿಸಬೇಕೆಂದರು ಮನವಿ ಮಾಡಿದರು.
ಮಾರ್ಚ್ 18,19,20ರಂದು ಸ್ವರಾಜ ಮೈದಾನದಲ್ಲಿ ದೇಶೀಯಾ ಮಟ್ಟದ ವಿವಿಧ ಕಲಾತಂಡಗಳಿಂದ ವಿವಿಧ ಸ್ತರದ ಕಾರ್ಯಕ್ರಮಗಳು ಜರಲಿದೆ.
ಮಾರ್ಚ್ 10ಕ್ಕೆ ಹೆಲಿಕ್ಯಾಪ್ಟರ್ ವಿಹಾರ, ಮಾರ್ಚ್ 15ರಂದು ಸ್ವರಾಜ್ ಮೈದಾನದಲ್ಲಿ ಗಾಳಿಪಟ ಉತ್ಸವ ಹಾಗೂ ನಡೆಯಲಿದೆ. ಮಾರ್ಚ್ 11, 12ರಂದು ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದಲ್ಲಿ ನೆಲೆಸಿರುವ ಚಿಂತನೆಗಳ ವಿಚಾರ ಸಂಕೀಣ, ಮಾರ್ಚ್ 11ರಿಂದ 13ರಂದು ರಾಧಿಕ ಹಾಗೂ ಮೂವಿ ಪ್ಲಾನೆಟ್ನಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕನ್ನಡ, ತುಳು ಚಲನಚಿತ್ರ ಪ್ರದರ್ಶನ ನಡೆಯಲಿದ್ದು, ಉಚಿತ ಪ್ರವೇಶ ಇರುತ್ತದೆ. ಮಾರ್ಚ್ 14ರಂದು ಸ್ವರಾಜ ಮೈದಾನದಲ್ಲಿ ಕರಕುಶಲ ವಸ್ತು ಪ್ರದರ್ಶನ, ಚಿತ್ರಸಂತೆ,ಆಹಾರೋತ್ಸವ ನಡೆಯಲಿದೆ. ಅದೇ ದಿನ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ದೀಪಾಲಂಕಾರ ನಡೆಯಲಿದ್ದು, ಪ್ರತಿಯೊಂದು ಮನೆ,ವಾಣಿಜ್ಯ ಸಂಕೀರ್ಣಗಳು, ಮಂದಿರ, ಮಸೀದಿ, ಬಸದಿ, ಚರ್ಚ್ ಸೇರಿದಂತೆ ದಾರ್ಮೀಕ ತಾಣಗಳು, ಹಳ್ಳಿ,ಹಳ್ಳಿಗಳಲ್ಲಿ ಪೇಟೆ ಪಟ್ಟಣಗಳಲ್ಲಿ ದೀಪಾಲಂಕರ ನಡೆಯಲಿದೆ. ಇದು ಬರೀ ಸರಕಾರಿ ಉತ್ಸವ ಎಂದು ಪರಿನಗೀಸದೇ ನಮ್ಮೆಲ್ಲರ ಉತ್ಸವ ಎಂದು ಕಾಣುವ ಆ ಮೂಲಕ ನಮ್ಮ ಜವಾಬ್ದಾರಿ ಮೆರೆಯೋಣವೆಂದರು.ಪ್ಲಾಸ್ಟಿಕ್ ಮುಕ್ತವಾಗಲಿ"
ಕಾರ್ಕಳ ಉತ್ಸವವು ಪಾಸ್ಟಿಕ್ ಮುಕ್ತವಾಗಿ ಜರಗಲಿರುವುದು. ಮಾರ್ಚ್ 5ರಂದು ಉತ್ಸವ ಆಮಂತ್ರಣವನ್ನು ಪ್ರತಿಯೊಂದು ಮನೆಗಳಿಗೆ ವಿತರಿಸಿಲಾಗುವುದು. ಮಾರ್ಚ್ 6ರಂದು ಕಾರ್ಕಳ ನಗರದಲ್ಲಿ ಎಲ್ಲಾ ರಸ್ತೆಗಳಲ್ಲಿ, ಮೈದಾನಗಳಲ್ಲಿ ಸ್ವಚ್ಚತಾ ಉತ್ಸವ ಜರಗಲಿರುವುದು, ಇದರಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 16ರಂದು ಮನೆ, ಮನೆಗಳಲ್ಲಿ ಮೆಹಂದಿ ಕಾರ್ಯಕ್ರಮ, ಮಾರ್ಚ್ 17ರಂದು ಖರೀದಿ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಆರ್ಥಿಕ ಚಟುವಟಿಕೆಗೆ ಗರಿಕೆದರುವಂತೆ ಮಾಡಲಿದೆ ಎಂದರು.
ಉತ್ಸವ ಪ್ರಯುಕ್ತ ರಜೆ ನೀಡುವಂತೆ ಕೋರಿಕೆ:
ಕಾರ್ಕಳ ಉತ್ಸವದ ಪ್ರಯುಕ್ತ ತಾಲೂಕು ವ್ಯಾಪ್ತಿಯಲ್ಲಿ ಎಲ್ಲಾ ಫ್ಯಾಕ್ಟರಿಗಳಿಗೆ ಮಾರ್ಚ್ 18, 19 ರಂದು ರಜೆ ನೀಡುವಂತೆ ಕೋರಿಕೊಂಡ ಸಚಿವ ಸುನೀಲ್ಕುಮಾರ್ ಶಾಲಾ,ಕಾಲೇಜುಗಳಿಗೆ ರಜೆ ನೀಡುವಂತೆ ಇಲಾಖಾಧಿಕಾರಿಗಳಿಗೆ ಅದೇಶಿಸಿದರು.ಕಾರ್ಕಳದ ಉದ್ಯಮಿಗಳು ಹೊರರಾಜ್ಯಗಳಲ್ಲಿ ಉದ್ಯಮದಲ್ಲಿ ತೊಡಗಿದ್ದ ಅವರುಗಳು ತಮ್ಮ ತಮ್ಮ ಊರಿಗೆ ಅಗಮಿಸಿ ಈ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಆಮಂತ್ರಿಸಿದರು.
ಯೋಗೀಶ ಕಿಣಿ ಕಾರ್ಕಳ ಗೀತೆ ಹಾಡಿದರು. ಗಣೇಶ್ ಜಾಲ್ಸೂರ್ ಸ್ವಾಗತಿಸಿದರು. ಮುನಿರಾಜ ರೆಂಜಾಳ ಪ್ರಸ್ತಾವಿಕವಾಗಿ ಮಾತನಾಡಿದರು. ಹರೀಶ್ ನಾಯಕ್ ನಿರೂಪಿಸಿ, ಧನ್ಯವಾದ ವಿತ್ತರು. ಮಾರ್ಚ್ 10ರಿಂದ 20 ರವರೆಗೆ ಕಾರ್ಕಳ ದಲ್ಲಿ ನಡೆಯುವ ಕಾರ್ಕಳ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.
ಸಚಿವ ಸುನಿಲ್ ಕುಮಾರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಮನೆ ಮಾತಾಗಲಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಹೆಬ್ರಿ ತಾ ಪಂ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಕಾರ್ಕಳ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಗುರುದತ್, ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ವ್ರತ್ತ ನಿರಿಕ್ಷಕ ಸಂಪತ್, ಎಸಿಎಫ್ ಸತೀಶ್, ಪುರಸಭೆ ಉಪಾಧ್ಯಕ್ಷೆ ಪಲ್ಲವಿ ರಾವ್, ವಕೀಲ ಎಂ ಕೆ ವಿಜಯ ಕುಮಾರ್, ಎಸ್ಸಿಡಿಸಿಸಿ ಬ್ಯಾಂಕ್ನ ಆಡಳಿತ ನಿರ್ದೇಶಕ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್, ಕೋಟೆ ಶ್ರೀ ಮಾರಿಯಮ್ಮ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲಕ್ರಷ್ಣ ರಾವ್, ಶ್ರೀ ವೆಂಕಟ್ರಮಣ ದೇವಸ್ಥಾನದ ಜಯರಾಮ್ ಪ್ರಭು, ಅನಂತ ಪದ್ಮನಾಭ ದೇವಸ್ಥಾನದ ಪ್ರಶಾಂತ್ ಭಟ್, , ಕಾಳಿಕಾಂಬಾ ದೇವಸ್ಥಾನದ ರಾಮಚಂದ್ರ ಆಚಾರ್ಯ, ವೀರಭದ್ರ ದೇವಸ್ಥಾನ ದ ಶಿವರಾಮ್ ಶೆಟ್ಟಿಗಾರ್, ತೆಳ್ಳಾರು ಸಿದ್ಧಿ ವಿನಾಯಕ ಶ್ರೀ ಕ್ಷೇತ್ರದ ವಿಘ್ನೇಶ್ ಪಾಠಕ್ ಉಪಸ್ಥಿತರಿದ್ದರು.
ಮುನಿರಾಜ ರೆಂಜಾಳ ಪ್ರಸ್ತಾವನೆಗೈದರು. ಗಣೇಶ್ ಜಾಲಸೂರು ಸ್ವಾಗತಿಸಿದರು. ಹರೀಶ್ ಅಜೆಕಾರ್ ಕಾರ್ಯಕ್ರಮ ನಿರೂಪಿಸಿದರು.