ಮಂಗಳೂರು, ಫೆ 21 (DaijiworldNews/MS): ರಾಜ್ಯವನ್ನು ತಲ್ಲಣಗೊಳಿಸಿರುವ ಹಿಜಾಬ್ - ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ನಗರ ಪೊಲೀಸರು ಸೋಮವಾರ ಬೆಳಗ್ಗೆ ಫೆಬ್ರವರಿ 21ರಂದು ನಗರದಲ್ಲಿ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಪಥ ಸಂಚಲನ ನಡೆಸಿದರು.
ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿರಾಮ್ ಶಂಕರ್, ನೇತೃತ್ವದಲ್ಲಿ ಪೊಲೀಸರು ಬಲ್ಲಾಳ್ಬಾಗ್ನಿಂದ ಅಂಬೇಡ್ಕರ್ ವೃತ್ತದ ಮೂಲಕ ಪೊಲೀಸ್ ಕಮಿಷನರೇಟ್ಗೆ ಮೆರವಣಿಗೆ ನಡೆಸಿದರು.
ಹಿಜಾಬ್ ಸಮಸ್ಯೆಯ ನಡುವೆ ಶಾಂತಿ ಮತ್ತು ಶಾಂತತೆಯನ್ನು ಕಾಪಾಡುವ ಮತ್ತು ಯಾವುದೇ ಕೋಮು ಉದ್ವಿಗ್ನತೆಯನ್ನು ತಡೆಯುವ ಉದ್ದೇಶದಿಂದ ಪಥ ಸಂಚಲನ ನಡೆಸಲಾಗಿದೆ ಎಂದು ಡಿಸಿಪಿ ಹೇಳಿದರು.