ಬೆಳ್ತಂಗಡಿ, ಫೆ 21 (DaijiworldNews/KP): ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಕಬಕ ಮೂಲದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಮುಂಡಾಜೆ ಗ್ರಾಮದ ಪರಮುಖ ಎಂಬಲ್ಲಿ ಫೆ 20 ರ ಭಾನುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಯುವಕನನ್ನು ಪುತ್ತೂರು ತಾಲೂಕು ಕಬಕ ನಿವಾಸಿ ಸುಂದರಿ ಎಂಬುವರ ಪುತ್ರ ಕಿರಣ್(20) ಎಂದು ಗುರುತಿಸಲಾಗಿದೆ.
ಕಿರಣ್ ಮುಂಡಾಜೆಯ ಪರಮುಖದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಸಹೋದರನ ಜೊತೆ ನದಿಯತ್ತ ತೆರಳಿದ್ದ ವೇಳೆ ಆತ ನಾಪತ್ತೆಯಾಗಿದ್ದ. ಈ ಕುರಿತು ಕುಟುಂಬಸ್ಥರು ಧರ್ಮಸ್ಥಳ ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿ ಯುವಕನ ಪತ್ತೆಗೆ ಸಹಾಯಯಾಚಿಸಿತ್ತು.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಭಾನುವಾರ ಕಾರ್ಯಾಚರಣೆ ನಡೆಸಿದ್ದು ರಾತ್ರಿಯಾದರೂ ಕಿರಣ್ನ ಸುಳಿವು ಸಿಗದ ಕಾರಣ ಇಂದು ಮತ್ತೆ ಕಾರ್ಯಾಚರಣೆ ಮುಂದುವರಿಸಿದಾಗ ಮೃತದೇಹ ಪತ್ತೆಯಾಗಿದೆ.