ಉಡುಪಿ, ಫೆ 20 (DaijiworldNews/HR): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಆರು ಜನ ವಿದ್ಯಾರ್ಥಿನಿಯರ ಹೋರಾಟ ರಾಜ್ಯ, ರಾಷ್ಟ್ರಕ್ಕೆ ವ್ಯಾಪಿಸಿದ್ದು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಕಲ್ಮಶಗಳು ಇಲ್ಲ. ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಕುಮ್ಮಕ್ಕು ಇದಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಮವಸ್ತ್ರ ನೀತಿ ಸಂಹಿತೆ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಹಿಂದಿನಿಂದ ಇದೆ. ಹೈಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ಸಮವಸ್ತ್ರ ಪಾಲಿಸಲು ಸೂಚಿಸಲಾಗಿದ್ದು, ಸಂವಿಧಾನಕ್ಕೆ ಕೋರ್ಟಿಗೆ ಈ ದೇಶಕ್ಕೆ ಗೌರವ ಕೊಡಬೇಕು. ಕೋರ್ಟ್ ವಿರುದ್ಧ ಯಾರು ನಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಇನ್ನು ಸಂವಿಧಾನಕ್ಕೆ ಗೌರವ ಕೊಟ್ಟು ಕೇಸರಿ ಹುಡುಗರು ಹೋರಾಟದಿಂದ ಹಿಂದೆ ಸರಿದಿದ್ದಾರೆ. ಸಂವಿಧಾನದಲ್ಲಿ ನ್ಯಾಯ ಕೇಳುವವರು ಸಂವಿಧಾನದ ವಿರುದ್ಧ ನಡವಳಿಕೆ ಮಾಡುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಕಲ್ಮಶಗಳು ಇಲ್ಲ. ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಕುಮ್ಮಕ್ಕು ಇದ್ದು ಇನ್ನಾದರೂ ಸಂವಿಧಾನಕ್ಕೆ ಕೋರ್ಟಿಗೆ ಗೌರವ ಕೊಟ್ಟು ನಡೆದುಕೊಳ್ಳಿ. ಸಂವಿಧಾನದ ಚೌಕಟ್ಟಿನಲ್ಲಿ ಶಿಕ್ಷಣಕ್ಕೆ ಮಹತ್ವವಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಿಯಮ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.