ಮಂಗಳೂರು, ಫೆ 20 (DaijiworldNews/HR): ಸಂತ ಕವಿ ಸರ್ವಜ್ಞ ಜಯಂತಿಯನ್ನು ಫೆ. 20ರ ಭಾನುವಾರ ಸರಳವಾಗಿ ತುಳುಭವನ ಉರ್ವಸ್ಟೋರ್ನಲ್ಲಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕುಲಾಲರ/ಕುಂಬಾರರ ಯುವವೇದಿಕೆ ಕರಾವಳಿ ವಿಭಾಗ, ಮಂಗಳೂರಿನ ಕರಾವಳಿ ಕುಲಾಲರ ಸಂಘಟನೆಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ತುಳುಭವನ ಉರ್ವಸ್ಟೋರ್ ನಲ್ಲಿ ಇಂದು ಸಂತ ಕವಿ ಸರ್ವಜ್ಞ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲಾ ಕರಾವಳಿ ಕುಲಾಲ ಕುಂಭಾರ ವೇದಿಕೆಯ ಉಪಾಧ್ಯಕ್ಷ ಮಹಾಬಲ ಕುಲಾಲ್, ಜಿಲ್ಲಾ ಕರಾವಳಿ ಕುಲಾಲ ಕುಂಬಾರ ವೇದಿಕೆಯ ಕಾರ್ಯದರ್ಶಿ ಸುಧಾಕರ, ವಿಭಾಗೀಯ ಅಧ್ಯಕ್ಷ ಜಯೇಶ್ ಗೋವಿಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ರಾಜೇಶ್ ಹಾಗೂ ಇತರರು ಸಂತ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ, ಗೌರವ ಅರ್ಪಿಸಿದರು.