ಮಂಗಳೂರು, ಡಿ 14 (MSP): ಕಡಲೂರು ಮಂಗಳೂರಿಗೆ ವಿದೇಶಿ ಪ್ರವಾಸಿಗರನ್ನು ಹೊತ್ತು ಐಷಾರಾಮಿ ಹಡಗು ಇಟಲಿಯ 'ಕೊಸ್ಟಾ ನಿಯೋ ರಿವೈರಾ' ಮತ್ತು ಮಾಲ್ಟಾ ದೇಶದ 'ಮರೆಲ್ಲಾ ಡಿಸ್ಕವರಿ' ಆಗಮಿಸಿತ್ತು.
ಕೊಸ್ಟಾ ನಿಯೋ ರಿವೈರಾದಲ್ಲಿ 1,727 ಪ್ರವಾಸಿಗರು ಮತ್ತು 500 ಸಿಬ್ಬಂದಿ, ಮರೆಲ್ಲಾ ಡಿಸ್ಕವರಿಯಲ್ಲಿ 1,839 ಪ್ರವಾಸಿಗರು ಮತ್ತು 720 ಸಿಬ್ಬಂದಿಗಳನ್ನು ಹೊತ್ತ ಎರಡು ಹಡಗುಗಳು ಬಂದು ಮಂಗಳೂರಿನ ಪ್ರವಾಸಿ ಕೇಂದ್ರಗಳನ್ನು ಕಣ್ತುಂಬಿಸಿ ಮತ್ತೆ ತನ್ನ ಪ್ರಯಾಣವನ್ನು ಬುಧವಾರದಂದು ಮುಂದುವರಿಸಿದೆ.
ಗೋವಾ ಹಾಗೂ ಮುಂಬಯಿ ಬಂದರಿನ ಮಾರ್ಗವಾಗಿ ಬಂದ ಈ ಎರಡು ಐಷರಾಮಿ ಹಡಗುಗಳ ಪ್ರವಾಸಿಗರನ್ನು ಮಂಗಳೂರು ಬಂದರಿನಲ್ಲಿ ಯಕ್ಷಗಾನ ಹಾಗೂ ಹುಲಿಕುಣಿತ ಪ್ರದರ್ಶನ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು.
ನಗರದ ಸುಮಾರು 450 ವರ್ಷಗಳ ಇತಿಹಾಸ ಹೊಂದಿರುವ ರೊಜಾರಿಯೋ ಕೆಥೇಡ್ರಲ್ ಚರ್ಚ್ ಸೇರಿದಂತೆ ತುಳುನಾಡಿನ ಐತಿಹಾಸಿಕ ಪ್ರವಾಸಿ ಸ್ಥಳ, ಹಾಗೂ ಐತಿಹಾಸಿಕ ದೇವಾಲಯವನ್ನು ಪ್ರವಾಸಿಗರು ಕಣ್ಣು ತುಂಬಿಸಿಕೊಂಡರು. ಜತೆಗೆ ತುಳುನಾಡಿನ ವಿಶಿಷ್ಟ ಖ್ಯಾದ್ಯಗಳನ್ನು ಸವಿದರು. ಕಳೆದ ವರ್ಷದಲ್ಲಿ ನವಮಂಗಳೂರು ಬಂದರಿಗೆ 22 ಪ್ರವಾಸಿ ಹಡಗು ಆಗಮಿಸಿದ್ದು, 24,258 ವಿದೇಶಿಗರು ಜಿಲ್ಲೆಯನ್ನು ಸಂದರ್ಶಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಒಟ್ಟು 32 ಹಡಗುಗಳು ಆಗಮಿಸಲಿವೆ.