ಮುಂಬೈ,ಡಿ 14 (MSP): ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಡಿ.12ರಂದು ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಆದರೆ ಅವರು ವಿವಾಹದ ದಿನ ಧರಿಸಿದ್ದ ಲೆಹಂಗಾದ ವಿಶೇಷತೆ ಇದೀಗ ಎಲ್ಲರನ್ನು ಅಚ್ಚರಿಗೀಡು ಮಾಡಿದೆ. ಹಾಗೆಂದು ನೀವು ಕೋಟಿಗಟ್ಟಲೆ ಬೆಲೆಬಾಳುವ ಧಿರಿಸು ಅಂದುಕೊಂಡರೆ
ಖಂಡಿತಾ ತಪ್ಪು. ಯಾಕೆಂದರೆ ಇಶಾ ಅಂಬಾನಿ ತಮ್ಮ ಮದುವೆಯ ದಿನ ಉಟ್ಟಿದ್ದು ಸುಮಾರು 35 ವರ್ಷಗಳಷ್ಟು ಹಳೆಯ ಸೀರೆಯನ್ನು !
ಹೌದು , ತಾಯಿ ನೀತಾ ಅಂಬಾನಿ 35 ವರ್ಷಗಳ ಹಿಂದೆ ತಮ್ಮ ವಿವಾಹದಲ್ಲಿ ಉಟ್ಟಿದ್ದ ಸೀರೆಯನ್ನೇ ಈಗ ಮಗಳು ಇಶಾ ಆಕೆಯ ಮದುವೆಯಲ್ಲೂ ಧರಿಸಿದ್ದಾರೆ. ತಾನು ಅಮ್ಮನ ಸೀರೆಯನ್ನೇ ಧರಿಸುತ್ತೇನೆ ಎಂದು ಖುದ್ದು ಇಶಾ ಅಂಬಾನಿಯೇ ಈ ಸೀರೆಯನ್ನು ಆಯ್ದುಕೊಂಡಿದ್ದರಂತೆ.
ಉತ್ತರ ಭಾರತದ ಮದುವೆಗಳಲ್ಲಿ ಹೆಚ್ಚಾಗಿ ವಧು ಲೆಹೆಂಗಾದ ಧರಿಸುತ್ತಾರೆ. ಜತೆಗೊಂದು ಹೆಗಲ ಮೇಲೆ ದುಪಟ್ಟಾ ರೀತಿಯ ಬಟ್ಟೆಯನ್ನು ಹಾಕಿಕೊಳ್ಳಲಾಗುತ್ತದೆ. ಮದುವೆಯ ದಿನ ಇಶಾ ಧರಿಸಿರುವ ಆ ವಸ್ತ್ರ ತನ್ನ ತಾಯಿ ನೀತಾ ಅಂಬಾನಿ ಅವರ ವಿವಾಹದ ದಿನ ಧರಿಸಿದ್ದಾಗಿತ್ತು. ಶ್ವೇತ ಬಣ್ಣದ ಲೆಹೆಂಗಾಕ್ಕೆ ಅಮ್ಮನ ಕೆಂಪು ಬಣ್ಣದ ವಸ್ತ್ರವನ್ನು ಧರಿಸುವ ಮೂಲಕ ಇಶಾ ತನ್ನ ಅಂದವನ್ನು ಇಮ್ಮಡಿಗೊಳಿಸಿದ್ದರು