ಮಂಗಳೂರು, ಫೆ. 19 (DaijiworldNews/SM): ಹಿಜಾಬ್ ಕುರಿತಂತೆ ಹೈಕೋರ್ಟ್ ನಲ್ಲಿ ವಿಚಾರಣೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿನಿಯರಿಂದ ಹಿಜಾಬ್ ಗಾಗಿ ಪಟ್ಟು ಹೆಚ್ಚಾಗುತ್ತಿದೆ. ನಾಲ್ಕು ದಿನದಿಂದ ಕಾಲೇಜು ಹೊರಗಡೆ ಇದ್ದೇವೆ. ಹಿಜಾಬ್ ಹಾಕಿದ್ದಕ್ಕೆ ಕಾಲೇಜಿಗೆ ಪ್ರವೇಶ ನೀಡಿಲ್ಲ. ವಿದ್ಯಾರ್ಥಿನಿ ತಲೆತಿರುಗಿ ಬಿದ್ದರೂ ಒಬ್ಬ ಶಿಕ್ಷಕರೂ ಬಂದಿಲ್ಲ ಎಂದು ಕಾವೂರು ಪಿಯು ಕಾಲೇಜು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ವಿದ್ಯಾರ್ಥಿನಿಯರು, ಶಿಕ್ಷಕರು ಅಧಿಕ ಪ್ರಸಂಗ ಮಾತಾನಾಡುತ್ತಿದ್ದಾರೆ. ನಮ್ಮನ್ನು ಮನೆಗೆ ಹೋಗಿ ಎಂದು ಹೇಳುತ್ತಿದ್ದಾರೆ. ನಮಗೆ ಪ್ರತ್ಯೇಕ ಕೊಠಡಿ ಕೊಡಿ ಎಂದರು ಕೊಡಲಿಲ್ಲ. ಒಂದು ಕೊಠಡಿ ಇದ್ದರೂ ಕೂಡ ನಮಗೆ ಕೊಟ್ಟಿಲ್ಲ. ಮನೆಯಿಂದ ಕೊಠಡಿ ತಂದು ಕುಳಿತುಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂಬುವುದಾಗಿ ಕಾವೂರು ಪಿಯು ಕಾಲೇಜು ವಿದ್ಯಾರ್ಥಿನಿಯರ ಆರೋಪ ವ್ಯಕ್ತಪಡಿಸಿದ್ದಾರೆ.