ಕಾರ್ಕಳ, ಫೆ 19 (DaijiworldNews/MS): ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಹೋರಾಟ ಹಿಂದೆ ವಿದೇಶಿ ಕೈವಾಡ ಷಡ್ಯಂತ್ರ ಇದೆ. ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ? ಹಿಜಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ? ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದರು.
ಕಾರ್ಕಳದಲ್ಲಿ ಬ್ರಹತ್ ಕಂದಾಯ ಮೇಳ ಉದ್ಘಾಟಿಸಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು.
ಹಿಜಾಬ್ ಹಿಂದೆ ಐಎಸ್ ಐ ಸಹಿತ ಕೆಲ ವಿದೇಶಿ ಅಂತರಾಷ್ಟ್ರೀಯ ಮಟ್ಟದ ಮತೀಯ ಸಂಘಟನೆಗಳ ಕೈವಾಡವಿದೆ. ಮುಗ್ಧ ಮಕ್ಕಳನ್ನು ದಾರಿ ತಪ್ಪಿಸುವ ಕೆಲಸ ಆಗುತಿದ್ದು. ಉನ್ನತ ತನಿಖೆಯ ಅಗತ್ಯತೆಯಿದೆ. ಮಕ್ಕಳು ಶಾಲೆಗೆ ಹೋಗೋದು ವಿದ್ಯಾಭ್ಯಾಸಕ್ಕೆಂದು.ಯಾವುದೇ ಧರ್ಮವಾದರೂ ಸರಿ, ವಿದ್ಯಾರ್ಥಿಗಳು ಧರ್ಮ ಪ್ರಚಾರಕ್ಕೆ ಶಾಲೆಗೆ ಹೋಗುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಹೀಗಾಗಿ ಶಾಲೆ-ಕಾಲೇಜಿಗೆ ಕೇವಲ ವಿದ್ಯೆ ಕಲಿಯಲು ಮಾತ್ರ ಹೋಗಿ, ಮನೆಯಲ್ಲಿ ನಿಮ್ಮ ಧರ್ಮ ಪಾಲಿಸಿ ಎಂದು ಹೇಳಿದರು.
ಹಿಜಬ್ ಹೋರಾಟ ಮಾಡಿ ಎಂದು ಐಸಿಎಸ್ ಹೇಳಿಕೊಟ್ಟಿದೆ.ಮಕ್ಕಳು ಇರುವುದರಿಂದ ನಾವು ಹೆಚ್ಚು ಹಸ್ತಕ್ಷೇಪ ಮಾಡಲು ಆಗುವುದಿಲ್ಲ.ನಾವು ಹಂತಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಹಿಜಬ್ ಹೋರಾಟದ ಸಮಗ್ರ ತನಿಖೆ ಆಗಬೇಕು ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಇದರ ಹಿಂದಿನ ದುರುಳರನ್ನು, ಭಯೋತ್ಪಾದಕರನ್ನು ಹೊರಗೆ ಎಳೆಯಬೇಕಾಗಿದೆ ಎಂದು ಹೇಳಿದರು.