ಮಂಗಳೂರು, ಫೆ 19 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಫೆಬ್ರವರಿ 26ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಫೆ.19ರ ಸಂಜೆ 6ರಿಂದ ಫೆ.26ರ ಸಂಜೆ 6ರವರೆಗೆ ಆದೇಶ ಅನ್ವಯವಾಗಲಿದೆ.
ಈ ಹಿಂದೆ ನಿಷೇಧಾಜ್ಞೆ ಹೊರಡಿಸಿದಾಗ ಫೆಬ್ರವರಿ 14ರ ಬೆಳಗ್ಗೆಯಿಂದ ಫೆಬ್ರವರಿ 19ರ ಸಂಜೆ 6ರವರೆಗೆ ಅನ್ವಯವಾಗುವಂತೆ ಮಾಡಲಾಗಿತ್ತು.
ವಿವಾದ ಇನ್ನೂ ಬಗೆಹರಿಯದ ಕಾರಣ ಶಾಲಾ-ಕಾಲೇಜುಗಳ ಸುತ್ತಲಿನ 200 ಮೀಟರ್ ದೂರದವರೆಗೆ ಆದೇಶವನ್ನು ವಿಸ್ತರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.