ಬಂಟ್ವಾಳ, ಡಿ 13(SM): ವನ್ಯ ಪ್ರಾಣಿ ಬೇಟೆಗೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸರಪಾಡಿ ಗ್ರಾಮದ ಸುಲೈಮಾನ್, ಅಹಮ್ಮದ್ ಶರೀಫ್, ಝೈನುದ್ದೀನ್ ಹಾಗೂ ದೇವಶ್ಯಪಡೂರು ಗ್ರಾಮದ ಅಬ್ದುಲ್ ಕುಂಞಿ ಎಂಬವರು ಬಂಧಿತ ಆರೋಪಿಗಳು.
ಬಂಧಿತರಿಂದ ಒಂದು ಕೋವಿ ಹಾಗೂ ಕೋವಿಗೆ ಉಪಯೋಗಿಸುವ ಪರಿಕರಗಳು, ಒಂದು ಚಾಕು, ಹಾಗೂ ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದ ಕೊಡ್ಯಮಲೆ ಮೀಸಲು ಅರಣ್ಯದ ಮಯಿದ್ಯೊಟ್ಟು ಎಂಬಲ್ಲಿ ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ವನ್ಯ ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆಯವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.