ಬಂಟ್ವಾಳ, ಫೆ.18 (DaijiworldNews/SM): ಸಂಬಂಧಿಕರ ಮಹಿಳೆಯರ ಜೊತೆ ರಾಸಲೀಲೆ ಮಾಡಿದ ಬಳಿಕ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಬಂಟ್ವಾಳ ಮಂಡಾಡಿ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿಯಾಗಿದ್ದು, ಬಂಟ್ವಾಳ ದಲ್ಲಿ ಬಂಧಿಸಲಾಗಿದೆ.
ಬಂಟ್ವಾಳ ಬಿ.ಕಸ್ಬಾ ಗ್ರಾಮದ ನಿತ್ಯಾನಂದ ನಗರದ ನಿವಾಸಿ ಮಹಿಳೆಯೋರ್ವಳ ನಗ್ನ ಪೋಟೋ ಗಳನ್ನು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯ ಗಂಡ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಬೆನ್ನು ಹತ್ತಿ ಆರೋಪಿಯನ್ನು ಬಂಧಿಸಿದಾಗ ಈತನ ಬಣ್ಣ ಬಯಲಾಗಿದೆ.
ಮಹಿಳೆಯ ನಗ್ನ ಪೋಟೋ ತೆಗೆದಿದ್ದ ಆರೋಪಿ ರಾಧಾಕೃಷ್ಣ ಕಳೆದ ಕೆಲ ದಿನಗಳಿಂದ 4.48 ಲಕ್ಷ ರೂ ನೀಡುವಂತೆ ಪೀಡಿಸುತ್ತಿದ್ದ, ಹಣ ನೀಡದಿದ್ದರೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದ, ಅ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಪ್ ಮಾಡಿ ಸುಮ್ಮನಾಗಿದ್ದ. ಬಳಿಕ ಮಹಿಳೆಯ ಗಂಡನ ಬಳಿ ಪೋಟೋ ತೋರಿಸಿ ಹಣ ನೀಡುವಂತೆ ಹೆದರಿಸಿ ಹೋಗಿ, ಎರಡು ದಿನಗಳ ಬಳಿಕ 17 ಜನ ಸಂಬಂಧಿಕರ ಗ್ರೂಪ್ ಮಾಡಿ ಅದರಲ್ಲಿ ಸಂತ್ರಸ್ತ ಮಹಿಳೆಯ ಗಂಡನನ್ನು ಸೇರಿಸಿ ಅಶ್ಲೀಲ ಚಿತ್ರಗಳನ್ನು ಶೇರ್ ಮಾಡಿದ್ದ. ಈ ಬಗ್ಗೆ ಸಂತ್ರಸ್ತ ಮಹಿಳೆಯ ಗಂಡ ದೂರು ನೀಡಿದ್ದರು.
ಕಳೆದ ಕೆಲ ವರ್ಷಗಳ ಹಿಂದೆ ಮಹಿಳೆಯರನ್ನು ಟಾರ್ಗೆಟ್ ಮಾಡಿ 18 ಮಹಿಳೆಯರ ಜೊತೆ ಚೆಲ್ಲಾಟವಾಡಿ ಬಳಿಕ ಕೊಲೆ ಮಾಡಿದ ಸೈನಡ್ ಮೋಹನ್ ಅವನ ನೆನಪು ಮಾಸುವ ಮೊದಲೇ ರಾಧಾಕೃಷ್ಣ ಬಂಟ್ವಾಳ ಎಂಬವನು ಕೂಡ ಅದೇ ರೀತಿ ಹಲವಾರು ಸಂಬಂಧಿಕರ ಜೊತೆ ರಾಸಲೀಲೆಯಲ್ಲಿ ತೊಡಗಿ ಬಳಿಕ ಅವರಲ್ಲಿ ಹಣಕ್ಕಾಗಿ ಪೀಡಿಸಿ ಇದೀದ ಜೈಲು ಪಾಲಾಗಿದ್ದಾನೆ.
ಆರೋಪಿ ರಾಧಾಕೃಷ್ಣ ನ ಜೊತೆ 10 ಕ್ಕೂ ಅಧಿಕ ಸಂಬಂಧಿಕ ಮದುವೆಯಾದ ಮಹಿಳೆಯರು ಹಾಗೂ ಇತರ ಮಹಿಳೆಯರು ರಾಸಲೀಲೆಯಲ್ಲಿ ತೊಡಗಿಕೊಂಡಿದ್ದಾರೆ. ಮದುವೆಯಾದ ಮಹಿಳೆಯರು ಅದರಲ್ಲಿ ಸಂಬಂಧಿಕ ಮಹಿಳೆಯರೇ ಈತನ ಟಾರ್ಗೆಟ್. ಸಂಬಂಧಿಕ ಮಹಿಳೆಯರನ್ನು ಲಾಡ್ಜ್ ಗಳಿಗೆ ಕೊಂಡು ಹೋಗಿ ಮಜಾ ಮಾಡುವುದೇ ಈತನ ಹುಚ್ಚು. ಸೈನಡ್ ಮೋಹನ್ ಅವನ ಪ್ರಕರಣ ಭೇದಿಸಿ ಆತನನ್ನು ಜೈಲಿಗಟ್ಟಿದ ವೃತ್ತ ನಿರೀಕ್ಷಕ ನಂಜುಂಡೇ ಗೌಡ ಅವರ ಜೊತೆ ನಗರ ಠಾಣೆಯ ಲ್ಲಿ ಎಸ್.ಐ.ಆಗಿ ಕೆಲಸ ಮಾಡಿದ ವಿವೇಕಾನಂದ ಅವರು ಪ್ರಸ್ತುತ ಬಂಟ್ವಾಳ ನಗರ ಪೋಲೀಸ್ ಠಾಣೆ ಯಲ್ಲಿ ವೃತ್ತ ನಿರೀಕ್ಷಕ ಹುದ್ದೆಯಲ್ಲಿದ್ದು, ರಾಧಾಕೃಷ್ಣ ಪ್ರಕರಣವನ್ನು ಭೇದಿಸಿದ್ದಾರೆ ಎಂಬುದು ಉಲ್ಲೇಖನೀಯ.
ಜೊತೆಗೆ ನಗರ ಠಾಣಾಧಿಕಾರಿ ಅವಿನಾಶ್ ಕೂಡ ಅ ಪ್ರಕರಣದ ಬೆನ್ನು ಹಿಡಿದು ಬಿಜಾಪುರ ಜಿಲ್ಲೆಯ ಲ್ಲಿ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಟ್ವಾಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.