ಕಾಸರಗೋಡು, ಫೆ.18 (DaijiworldNews/SM): ಜಿಲ್ಲೆಯಲ್ಲಿ ಶುಕ್ರವಾರ 97 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು, 230 ಮಂದಿ ಗುಣ ಮುಖರಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 1,098 ಮಂದಿ ಚಿಕಿತ್ಸೆಯಲ್ಲಿದ್ದಾರೆ. 5,695 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1,65,396 ಮಂದಿಗೆ ಸೋಂಕು ದೃಢ ಪಟ್ಟಿದ್ದು, ಈ ಪೈಕಿ 1,62,089 ಮಂದಿ ಗುಣಮುಖರಾಗಿದ್ದಾರೆ.
ಇಲ್ಲಿಯ ತನಕ ಮೃತಪಟ್ಟವರ ಸಂಖ್ಯೆ 1,197 ಕ್ಕೇರಿದೆ. 27 ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ. ಕೇರಳದಲ್ಲಿ 7,780 ಮಂದಿಗೆ ಸೋಂಕು ದೃಢ ಪಟ್ಟಿದೆ.