ಕಾರ್ಕಳ, ಫೆ 18 (DaijiworldNews/MS): ಕುಕ್ಕುಂದೂರು ಗ್ರಾಮ ಪಂಚಾಯತ್ನ ಮೈದಾನದಲ್ಲಿ ಫೆಬ್ರವರಿ 19ರಂದು ಜರಗಲಿರುವ ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ ಮತ್ತು ಹೆಬ್ರಿ ತಾಲೂಕು ಮಟ್ಟದ ಕಂದಾಯ ಮೇಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಹಾಗೂ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ಕುಮಾರ್ ವಹಿಸಲಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಫೆಬ್ರವರಿ 12ರಿಂದ 19ರ ವರೆಗೆ ಕಡತ ವಿಲೇವಾರಿ ಸಪ್ತಾಹ ಅಭಿಯಾನದಲ್ಲಿ ಆಯೋಜಿಸಲಾಗಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಂತೆ ಎಲ್ಲಾ ಇಲಾಖೆಗಳಿಂದ ಫೆ. 11ರ ತನಕ 8956 ಕಡತಗಳು ಬಾಕಿ ಇತ್ತು. ಒಟ್ಟು 6181 ಪ್ರಕರಣಗಳ ವಿಲೇವಾರಿ ಆಗಿರುತ್ತದೆ. ಈ ಒಂದು ವಾರದ ಅವಧಿಯಲ್ಲಿ ಶೇ 70.00ರಷ್ಟು ಪ್ರಮಾಣದಲ್ಲಿ ಕಡತಗಳು ವಿಲೇವಾರಿ ಆಗಿರುತ್ತದೆ.
ಕಡತ ವಿಲೇವಾರಿ ಸಪ್ತಾಹ ಅಭಿಯಾನದಲ್ಲಿ ಎಲ್ಲಾ ಇಲಾಖಾ ಮಟ್ಟದ ಅಧಿಕಾರಿಯವರು ಹಾಗೂ ಸಿಬ್ಬಂದಿಗಳು ಹೆಚ್ಚು ಸಮಯದಲ್ಲಿ ಕಛೇರಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿರುವುದು ಕಡತ ವಿಲೇವಾರಿಗೆ ಕಾರಣವಾಗಿದೆ. ಇದರಿಂದ ಸಾರ್ವಜನಿಕರು ಕಛೇರಿಗೆ ಅಲೆದಾಡುವಂತಹ ಸಮಸ್ಯೆಯನ್ನು ನಿವಾರಿಸದಂತಾಗಿದೆ. ಫೆ. 19 ರಂದು ನಡೆಯುವ ಕಂದಾಯ ಮೇಳದಲ್ಲಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಒಟ್ಟು 4198 ಅರ್ಹ ಫಲಾನುಭವಿಗಳಿಗೆ ಸರಕಾರದ ವತಿಯಿಂದ ದೊರಕುವ ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ವಿತರಿಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಪ್ರಯೋಜನವಾಗಿದೆ.