ಮಂಗಳೂರು, ಫೆ 18 (DaijiworldNews/MS): ನಗರದಲ್ಲಿ ಹಲವು ಪ್ರದೇಶದಲ್ಲಿ ಫೆ.17 ರ ರಾತ್ರಿ ವೇಳೆಗೆ ಗ್ಯಾಸ್ ಸೋರಿಕೆ ಆದ ವಾಸನೆ ಹರಡಿ ಜನರಲ್ಲಿ ಆತಂಕ ಮೂಡಿಸಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಗ್ಯಾಸ್ ಸೋರಿಕೆಯಾದ ಮೂಲ ಪತ್ತೆಗೆ ಕಾರ್ಯಾಚರಣೆಗೆ ಮುಂದಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮಂಗಳೂರು ನಗರದ ವಿವಿಧ ಪ್ರದೇಶದಲ್ಲಿ ರಾತ್ರಿ ವೇಳೆ ಗ್ಯಾಸ್ ಸೋರಿಕೆಯಾದ ರೀತಿಯಲ್ಲಿ ಘಾಟು ವಾಸನೆ ಪಸರಿಸಿದಂತೆ ಕಂಡುಬಂದಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ್ ನಿಯಂತ್ರಣ ಕೊಠಡಿಗೆ ದೂರು ಸಲ್ಲಿಕೆಯಾಗಿರುತ್ತದೆ. ಕೂಡಲೇ ಪೊಲೀಸ್ ಇಲಾಖೆ , ಅಗ್ನಿಶಾಮಕ ಇಲಾಖೆ ಮತ್ತು ಉಪ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದ್ದು, ಗ್ಯಾಸ್ ಸೋರಿಕೆಯಾದ ಮೂಲ ಪತ್ತೆಗೆ ಕಾರ್ಯಾಚರಣೆ ಪ್ರಗತಿಯಲ್ಲಿರುತ್ತದೆ. ಗ್ಯಾಸ್ ಸೋರಿಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಮಾಹಿತಿ/ ದೂರುಗಳು ಇದ್ದಲ್ಲಿ ಕೂಡಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣ ಕೊಠಡಿಯ ಟೋಲ್ ಪ್ರೀ ಸಂಖ್ಯೆ 1077 ಕರೆ ಮಾಡಿ ತಿಳಿಸಲು ಕೋರಿದೆ.