ಉಡುಪಿ, ಫೆ 17 (DaijiworldNews/MS): ಜಿಲ್ಲೆಯಲ್ಲಿ ಎಲ್ಲಾ ಕಡೆ ಶಾಂತಿಯುತವಾಗಿ, ಶಾಲಾ ಕಾಲೇಜು ಆರಂಭವಾಗಿದ್ದು, ಕೆಲವೆಡೆ ಹಿಜಾಬ್ ತೆಗೆಯಲು ಇಷ್ಟ ಇಲ್ಲದ ವಿದ್ಯಾರ್ಥಿನಿಯರು ಮಾತ್ರ ವಾಪಾಸ್ ತೆರಳಿದ್ದಾರೆ ಎಂದು ಎ.ಎಸ್ಪಿ ಸಿದ್ದಲಿಂಗಪ್ಪ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, " ನಾಳೆ ಪರೀಕ್ಷೆಗಳು ಇರುವುದರಿಂದ ಎಮ್.ಜಿ.ಎಮ್ ಕಾಲೇಜು ಪುನಾರಂಭ ಗೊಳ್ಳಲಿದೆ.ಸದ್ಯ ಡಾ ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳು ಕೆಲವು ಮುಸ್ಲಿಂ ಯುವತಿಯರು ತರಗತಿಯಲ್ಲಿದ್ದು , ಹಿಜಾಬ್ ತೆಗೆಯಲು ಇಷ್ಟ ಇಲ್ಲದವರು ವಾಪಸ್ ತೆರಳಿದ್ದಾರೆ., ಜಿಲ್ಲೆಯಲ್ಲಿ ಶಾಂತಿಯುತ ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನು ವಿದ್ಯಾರ್ಥಿನಿಯೋರ್ವಳು ಮಾದ್ಯಮಗಳಿಗೆ ಪ್ರತಿಕ್ರಿಯಿಸಿ, " ಧರ್ಮ ಮತ್ತು ಶಿಕ್ಷಣ ಎರಡು ಮುಖ್ಯ,ನಾವು ಹಿಜಾಬ್ ತೆಗೆದು ತರಗತಿಯಲ್ಲಿ ಕೂರಲ್ಲ ಹೀಗಾಗಿನಮಗೆ ಹಿಜಾಬ್ ಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.ಸರಕಾರದ ಗೊಂದಲಕ್ಕೆ ನಮ್ಮ ಶಿಕ್ಷಣ ಹಾಳಾಗುತ್ತಿದೆ. ಆದೇಶ ಆದಷ್ಟು ಬೇಗ ಸ್ಪಷ್ಟ ಹೈಕೋರ್ಟ್ ನಿಂದ ಬರಲಿ.ಅಲ್ಲಿಯವರೆಗೆ ನಾವು ಭೌತಿಕ ತರಗತಿ ಗೆ ಹೋಗಲ್ಲ.ನಮ್ಮ ಇತರ ಧರ್ಮದ ಸಹಪಾಠಿಗಳು ನಮಗೆ ಪಠ್ಯಕ್ಕೆ ತುಂಬಾ ಸಹಕಾರ ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.
ಇನ್ನು ಸರಕಾರಿ ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸುಮಾರು 60 ವಿದ್ಯಾರ್ಥಿನಿಯರು ತರಗತಿ ತೊರೆದು ಮನೆಗೆ ತೆರಳಿದ್ದಾರೆ. ಉಳಿದೆಲ್ಲ ವಿದ್ಯಾರ್ಥಿಗಳು ಶಾಂತಿಯುತ ವಾಗಿ ತರಗತಿ ಹಾಜರಾಗಿದ್ದಾರೆ. ಸಮವಸ್ತ್ರ ಸಂಹಿತೆಯ ಬಗ್ಗೆ ಸಿ. ಎಂ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಬರೆದು ಕೊಡುವಂತೆ ವಿದ್ಯಾರ್ಥಿನಿಯರ ಒತ್ತಾಯಿಸಿದ್ದು , ಪರೀಕ್ಷೆಯ ಬಗ್ಗೆ ಪ್ರಾಂಶುಪಾಲರಲ್ಲಿ ಮಾತುಕತೆ ನಡೆಸಲು ಪೋಷಕರೊಂದಿಗೆ ವಿದ್ಯಾರ್ಥಿನಿಯರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಲೇಜು ಸುತ್ತ ಪೋಲಿಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.