ಉಳ್ಳಾಲ,ಡಿ 13(MSP): ಮನುಷ್ಯನಂತೆ ಮಾತೃ ಪ್ರೇಮವನ್ನು ಮೆರೆಯುವ ಹಲವಾರು ಪ್ರಾಣಿ, ಪಕ್ಷಿಗಳ ಉದಾಹರಣೆಗಳು ವರದಿಯಾಗುತ್ತಲೇ ಇರುತ್ತದೆ. ಅಂತೆಯೇ ಇಲ್ಲೊಂದು ದನವೂ ತನ್ನ ಕೂಡಾ ತನ್ನ ಕಳೆದುಕೊಂಡ ಕರುವನ್ನು ನೆನೆದು ಬೆಚ್ಚಿಬೀಳುತ್ತಲೆ ಇದೆ ಎನ್ನುತ್ತಾರೆ ಈ ದನವನ್ನು ಸಾಕುತ್ತಿರುವ ಕೊಲ್ಯದ ನಾರಾಯಣ್ಣ.
ಇವರು ಮುದ್ದಿನಿಂದಲೇ ಬೆಳೆಸಿದ ಗೋಪಿ ಹೆಸರಿನ ದನ ಮೇಯಲೆಂದು ಹಟ್ಟಿಯಿಂದ ಬಿಟ್ಟರೆ ಸಾಕು ದಿನದಲ್ಲಿ ಎರಡುಮೂರು ಸಾರಿಯಾದರೂ, ಕಿವಿಗೆ ಗಾಳಿಬಿದ್ದ ಕರುಗಳ ಹಾಗೆ ಮನೆಯತ್ತ ಓಡೋಡಿ ಬರುತ್ತಾಳೆ. ಬಳಿಕ ತನ್ನ ಕರು ಹಟ್ಟಿಯಲಿ ಸುರಕ್ಷಿತವಾಗಿದೆ ಎಂದು ಖಾತ್ರಿಪಡಿಸಿಕೊಂಡು ಮತ್ತೆ ಹಿಂತಿರುಗಿ ಹೋಗುತ್ತಾಳೆ.
ಈ ದನ ಹೀಗೆ ಬರುವುದಕ್ಕೂ ಒಂದು ಕಾರಣವಿದೆ ಎನ್ನುತ್ತಾರೆ ಮನೆ ಮಂದಿ. ಎರಡು ವರ್ಷಗಳ ಹಿಂದೆ ಗೋಪಿ ದನ ಮುದ್ದಾದ ಕರು ಹಾಕಿತ್ತು . ಆದರೆ ಮೇಯಲು ಹೋದಾಗ ಗೋಪಿಯ ಕರು ಲಾರಿಯಡಿ ಬಿದ್ದು ಪ್ರಾಣ ಬಿಟ್ಟಿತ್ತು. ಆದರೆ ಆ ನೋವನ್ನು ಇಂದಿಗೂ ಮರೆಯಲಾಗದ ಗೋಪಿ, ಇಂದು ಕೂಡಾ ದೊಡ್ಡ ದೊಡ್ಡ ವಾಹನಗಳ ಕಿವಿಗಚ್ಚುವ ಸದ್ದು, ಹಾರ್ನ್ ಕೇಳಿದರೆ ಮನೆಯತ್ತ ಓಡಿ ಬರುತ್ತದೆಯಂತೆ. ಅಲ್ಲದೆ ಹಟ್ಟಿಯಲ್ಲಿ ಈಗ ಇರುವ ಕರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುತ್ತಾಳೆಂದು ಮನೆ ಮಂದಿ ತಿಳಿಸಿದ್ದಾರೆ.