ಕಡಬ, ಫೆ 16(DaijiworldNews/MS): ತೋಟದಲ್ಲಿ ಸ್ಪ್ರಿಂಕ್ಲರ್ ಅಳವಡಿಸುತ್ತಿದ್ದಾಗ ವಿಷಪೂರಿತ ಜಂತು ಕಡಿದು ರೈತನೋರ್ವ ಮೃತಪಟ್ಟ ಘಟನೆ ಕೋಡಿಂಬಾಳ ಗ್ರಾಮದಲ್ಲಿ ಫೆ.15ರ ಮಂಗಳವಾರ ರಾತ್ರಿ ನಡೆದಿದೆ.
ಕೋಡಿಂಬಾಳ ಗ್ರಾಮದ ಪೆಲತ್ತೋಡಿ ನಿವಾಸಿ ಧರ್ಮಪಾಲ ಗೌಡ ಮೃತರು. ಇವರು ತಮ್ಮ ಮನೆಯ ಸಮೀಪದಲ್ಲಿರುವ ತೋಟದಲ್ಲಿ ಸ್ಪ್ರಿಂಕ್ಲರ್ ಅಳವಡಿಸುತ್ತಿದ್ದಾಗ ಹೋದ ವೇಳೆ ವಿಷಜಂತು ಕಾಲಿಗೆ ಕಡಿದಿದ್ದು, ಮನೆಗೆ ವಾಪಸಾಗುತ್ತಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.