ಅಬುದಾಬಿ,ಡಿ 13(MSP): ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಈಡಿಯಟ್ ಎಂದು ಸಂದೇಶ ಕಳುಹಿಸಿದಕ್ಕೆ ಯುನೈಟೆಡ್ ಅರಬ್ ಎಮಿರಟ್ಸ್ ನ್ಯಾಯಾಲಯ ಆ ಪ್ರೇಮಿಗೆ ಇಪತ್ತು ಸಾವಿರ ದಿರಮ್ಸ್( ನಾಲ್ಕು ಲಕ್ಷ) ದಂಡ ತೆರುವಂತೆ ಹೇಳಿದಲ್ಲದೆ 60 ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಅರಬ್ ರಾಷ್ಟ್ರಗಳಲ್ಲಿ ಮಹಿಳೆಯನ್ನು ಗೌರವವನ್ನು ನೀಡಬೇಕೆಂಬ ನಿಯಮವಿದೆ. ಆಕೆಗೆ ಅವಮಾನ, ನಿಂದನೆ ಮಾಡಿದ್ರೆ ಅಲ್ಲಿನ ಸರ್ಕಾರ ಶಿಕ್ಷೆ ವಿಧಿಸುತ್ತದೆ.
ಪ್ರೇಯಸಿಯೊಬ್ಬಳು ತನ್ನ ಪ್ರೇಮಿಗೆ ಜೋಕ್ ಒಂದನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದಳು. ಆದರೆ ಪ್ರೇಮಿ ತನ್ನ ಪ್ರೇಯಸಿ ಜೊತೆ ವಾಟ್ಸಪ್ನಲ್ಲಿ ಚಾಟಿಂಗ್ ಮಾಡುವ ವೇಳೆ ಆಕೆ ಕಳುಹಿಸಿದ್ದ ಜೋಕ್ಗೆ ಯುವಕ ಈಡಿಯಟ್ ಎಂದು ಮಾರುತ್ತರ ನೀಡಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಪ್ರೇಯಸಿ ತನ್ನ ಪ್ರೇಮಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಆಕೆ ನೀಡಿದ ದೂರಿನ ಮೇಲೆ ನ್ಯಾಯಾಲಯವೂ ಯುವಕ, ಯುವತಿಗೆ ಅವಮಾನ ಮಾಡಿದ್ದು ಮಾತ್ರವಲ್ಲದೆ ಮಹಿಳೆಯನ್ನು ಗೌರವವಿಸಿಲ್ಲ ಎಂದು ಆತನಿಗೆ 60 ದಿನಗಳ ಜೈಲು ಶಿಕ್ಷೆ ಹಾಗೂ 4 ಲಕ್ಷ ರೂ. ದಂಡ ವಿಧಿಸಿದೆ. ಹೀಗಾಘಿ ತನ್ನ ಪ್ರೇಯಸಿಗೆ ಈಡಿಯಟ್ ಅಂದ ಪ್ರೇಮಿ ಜೈಲು ಪಾಲಾಗಿದ್ದಾನೆ