ಕಾರ್ಕಳ, ಡಿ 13(MSP): ಬೈಲೂರು ಕೆಳ ಪೇಟೆಯ ಬಳಿ ಮುಸ್ಲಿಂ ಸಮುದಾಯದ ದರ್ಗಾದ ಆಕೃತಿ ತಂದಿರಿಸುವ ಮೂಲಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಘಟನೆ ಡಿ.12 ರ ಬುಧವಾರ ಸಂಭವಿಸಿದೆ. ಇದನ್ನು ಮಂಗಳವಾರ ರಾತ್ರಿ ಇಲ್ಲಿ ಯಾರೋ ಕಿಡಿಗೇಡಿಗಳು ತಂದಿರಬಹುದು ಎಂದು ಶಂಕಿಸಲಾಗಿದೆ. ದರ್ಗಾವನ್ನು ಹೋಲುವ ಆಕೃತಿಯೊಂದಕ್ಕೆ ಹಸಿರು ಹೊದಿಕೆ ಅಳವಡಿಸಿರುವುದು ಕಂಡುಬಂದಿತ್ತು.
ಈ ಬಗ್ಗೆ ಸ್ಥಳೀಯ ಜಿ.ಪಂ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಅವರು ನಗರ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಸ್ಥಳೀಯ ಪಿಡಿಓ ನೇತೃತ್ವದಲ್ಲಿ ಅದನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಹಿಂದೆ ಆ ಭಾಗದಲ್ಲಿದ್ದ ದರ್ಗಾವನ್ನು ೫ ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿತ್ತು. ಜತೆಗೆ ಅಲ್ಲೇ ಇದ್ದ ಶಾರದಾ ವೇದಿಕೆಯನ್ನೂ ತೆರವು ಮಾಡಲಾಗಿತ್ತು. ಹಿಂದೂ ಸಂಘಟನೆಯ ಆ ಸ್ಥಳಕ್ಕೆ ಭೇಟಿ ಮಾಡು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾ.ಪಂ. ಮೂಲಕ ನಗರ ಠಾಣೆಗೆ ದೂರು ನೀಡಿದ ಪರಿಣಾಮ, ಸ್ಥಳಕ್ಕಾಗಮಿಸಿದ ನಗರ ಪಿಎಸ್ಐ ನಂಜಾ ನಾಯ್ಕ ಹಾಗೂ ಸಿಬ್ಬಂದಿ ವರ್ಗ ಈ ದರ್ಗಾ ಆಕೃತಿಯನ್ನು ತೆರವುಗೊಳಿಸಿದ್ದಾರೆ.
ಇದೊಂದು ಶಾಂತಿ ಕಡಡುವ ಯತ್ನ ಎಂದು ಸ್ಥಳೀಯರು ದೂರಿದ್ದಾರೆ. ಅಲ್ಲದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸಿ, ಕ್ರಮ ಕೈಗೊಳ್ಳುವಂತೆ ಜಿ.ಪಂ.ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.