ಕಾರ್ಕಳ, ಡಿ 13(MSP): ವರ್ಣಮಾತ್ರಂ ಕಲಿಸಿದಾತಂ ಗುರು ಎಂಬ ಮಾತಿದೆ. ಗುರುಗಳು ಮತ್ತು ವಿದ್ಯಾರ್ಥಿಗಳ ಸಂಬಂಧ ಅತ್ಯಂತ ಪವಿತ್ರವಾದುದು. ಆದರೆ ಇಲ್ಲೊಬ್ಬ ಉಪನ್ಯಾಸಕ ಗುರುವಿಗೆ ಕಳಂಕ ತರುವ ರೀತಿ ಕೆಲಸ ಮಾಡಿದ್ದಾನೆ ತಾನು ಪಾಠ ಮಾಡಿದ ವಿದ್ಯಾರ್ಥಿನಿಯನ್ನೇ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.
ಹೊಸ್ಮಾರು-ನಾರಾವಿ ನಡುವಿನ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ಮಂಕುಬೂದಿ ಎರಚಿ ರೂಮ್ವೊಂದರಲ್ಲಿ ಅತ್ಯಾಚಾರ ನಡೆಸಿರುವ ಘಟನಾವಳಿಯು ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುವುದನ್ನು ವಾಹಿನಿಯೊಂದು ಪ್ರಸಾರ ಮಾಡಿದ್ದು ಅದು ಫೇಸ್ ಬುಕ್, ವಾಟ್ಸಾಪ್ನಲ್ಲಿ ವೈರಲ್ ಆಗಿದೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ದೃಶ್ಯಾವಳಿಗಳು ಈ ವಿಡಿಯೋದಲ್ಲಿ ಅಡಕವಾಗಿದೆ.
ದೂರು ಬಾರದೇ ಇದಲ್ಲಿ ಸ್ವಯಂ ಪ್ರೇರಿತ ದೂರು ದಾಖಲು!
ವಾಹಿನಿಯೊಂದರಲ್ಲಿ ಬಂದಿರುವ ಸುದ್ದಿಯನ್ನು ಗಮನದಲ್ಲಿ ಇರಿಸಲಾಗಿದೆ. ಇದುವರೆಗೆ ವಿದ್ಯಾರ್ಥಿನಿಯದಾಗಲಿ ಅವಳ ಹೆತ್ತವರದಾಗಲಿ ಇದು ವರೆಗೆ ದೂರು ಬಂದಿಲ್ಲ.
ದೂರು ನೀಡಲು ಹಿಂದೇಟು ಹಾಕಿದಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕಾಗುತ್ತದೆ. ಪೊಲೀಸ್ ಇಲಾಖೆ ಮಾಹಿತಿ ಕಲೆ ಹಾಕಿರುವಂತೆ ಶಿಕ್ಷಕ ಬೆಳ್ತಂಗಡಿಯ ಪ್ರಸಾದ್ ಎಂದು ತಿಳಿದುಬಂದಿರುವುದಾಗಿ ಪೊಲೀಸ್ ವೃತ್ತ ನಿರೀಕ್ಷಕ ಅಲ್ಮೂರ್ತಿ ತಿಳಿಸಿದ್ದಾರೆ.