ಮಹಾರಾಷ್ಟ್ರ, ಡಿ ೧೨(SM): 'ಪಪ್ಪು' ಎಂದು ಅವಹೇಳನ ನಡೆಸಲಾಗುತ್ತಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಈಗ ಪರಮ ಪೂಜ್ಯವಾಗಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢಗಳಲ್ಲಿ ಕಾಂಗ್ರೆಸ್ನ ಗೆಲುವನ್ನು ಪ್ರಸ್ತಾಪಿಸಿ ಮತನಾಡಿದ ಠಾಕ್ರೆ, 'ರಾಹುಲ್ ಗಾಂಧಿ ಗುಜರಾತ್ನಲ್ಲಿ ಒಬ್ಬಂಟಿಯಾಗಿದ್ದರು. ಈಗ ಪಪ್ಪು ಪರಮ ಪೂಜ್ಯರಾಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವರ ನಾಯಕತ್ವವನ್ನು ಸ್ವೀಕರಿಸಲಾಗುತ್ತದೆಯೇ? ನೀವು ಅದನ್ನು ನೋಡುತ್ತಿದ್ದೀರಿ' ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ವರ್ತನೆಯಿಂದಾಗಿ ಪಕ್ಷಕ್ಕೆ ಸೋಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಆ ರೀತಿ ನಡೆದುಕೊಂಡಿದ್ದರು.
ಬಿಜೆಪಿ ಎಲ್ಲ ಕಾರ್ಯಗಳಲ್ಲಿಯೂ ವಿಫಲವಾಗಿದೆ ಎಂಬುವುದು ದೇಶದ ಜನರಿಗೆ ಈಗ ಸ್ಪಷ್ಟವಾಗಿದೆ. ಅವರಿಗ ಪ್ರದರ್ಶಿಸಲು ಏನೂ ಉಳಿದಿಲ್ಲ. ಹೀಗಾಗಿ ರಾಮಮಂದಿರ ಕಾರ್ಡ್ ಬಳಕೆ ಮಾಡುತ್ತಿದ್ದಾರೆ ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.