ನವದೆಹಲಿ, ಡಿ 12(SM): ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಹಿನಾಯ ಸೋಲಿನಿಂದಾಗಿ ಬುದ್ಧಿ ಕಲಿತಿರುವ ಬಿಜೆಪಿ ಲೋಕಸಭೆ ಚುನಾವಣೆ ವೇಳೆಗೆ ದೊಡ್ಡ ನಿರ್ಣಯವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ.
ಆ ಮೂಲಕ ಕಳೆದುಕೊಂಡಿರುವ ಗ್ರಾಮೀಣ ಮತಗಳನ್ನು ಮರಳಿ ಪಡೆಯಲು ಯೋಜನೆ ರೂಪಿಸುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದ ಸೋಲಿಗೆ ಪ್ರಮುಖ ಕಾರಣ ರೈತರು, ಗ್ರಾಮೀಣ ಜನರು ಬಿಜೆಪಿ ಪಕ್ಷಕ್ಕೆ ಮತ ಹಾಕಿಲ್ಲ ಅನ್ನುವುದು ಸ್ಪಷ್ಟವಾಗಿದೆ. ಚುನಾವಣಾ ಫಲಿತಾಂಶದ ವರದಿಗಳು ಸಹ ಇದೇ ವಿಚಾರಗಳನ್ನು ಸ್ಪಷ್ಟಪಡಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಕೇಂದ್ರವು ಗ್ರಾಮೀಣ ಜನರನ್ನು ಸಂತುಷ್ಟಗೊಳಿಸುವ ಯೋಜನೆಗೆ ಕೈಹಾಕುತ್ತಿದೆ. ಕೇಂದ್ರ ಸರ್ಕಾರವು ರೈತರ ಸಾಲಮನ್ನಾ ಮಾಡುವ ಬಗ್ಗೆ ಯೋಜನೆ ರೂಪಿಸುತ್ತಿದೆ. ಗ್ರಾಮೀಣ ಮತಗಳನ್ನು ಗಳಿಸಲು ಇದು ಅವಶ್ಯಕ ಎಂದು ಬಿಜೆಪಿಗೆ ಅನಿಸಿದೆ. ಅದರಲ್ಲಿಯೂ ಮಧ್ಯಪ್ರದೇಶದಲ್ಲಿ ರೈತರನ್ನು ಎದುರು ಹಾಕಿಕೊಂಡಿದ್ದಕ್ಕೆ ಸೋತಿದ್ದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಗ್ರಾಮೀಣ ಜನರು ಬಿಜೆಪಿ ವಿರುದ್ಧ ಈಗಾಗಲೇ ಹಲವು ರಾಜ್ಯಗಳಲ್ಲಿ ರೈತರು ವಿವಿಧ ಕಾರಣಗಳಿಗಾಗಿ ಕೇಂದ್ರದ ವಿರುದ್ಧ ಇದ್ದಾರೆ. ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಮುಂಚಿನಿಂದಲೂ ಕಾಂಗ್ರೆಸ್ಗಿಂತಲೂ ಹಿಂದೆಯೇ ಇದೆ. ಇದನ್ನು ನಿವಾರಿಸಲು ಸಾಲಮನ್ನಾ ಬಿಜೆಪಿಗೆ ಸಹಾಯವಾಗಲಿದೆ ಎಂಬ ಲೆಕ್ಕಾಚಾರವನ್ನು ಬಿಜೆಪಿಯ ಪ್ರಮುಖರು ತಿಳಿಸಿದ್ದಾರೆ. ಹಲವು ಬಾರಿ ರೈತರು ಪ್ರತಿಭಟಿಸಿದ್ದಾರೆ ಮೋದಿ ಅವರ ಆಡಳಿತದಲ್ಲಿಯಂತೂ ರೈತರು ಹಲವು ಬಾರಿ ಕೇಂದ್ರದ ಮೇಲೆ ಪ್ರತಿಭಟನೆ ಮಾಡಿದ್ದಾರೆ. ಇದೀಗ ಪಂಚ ರಾಜ್ಯಗಳಲ್ಲಿ ಹೀನಾಯ ಮುಖಭಂಗವಾದ ಬಳಿಕ ಎಚ್ಚೆತ್ತಿರುವ ಮೋದಿ ನೇತೃತ್ವದ ಕೇಂದ್ರ ಸರಕಾರ ಸಾಲ ಮನ್ನಾ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.