ಮಂಗಳೂರು, ಫೆ 13 (DaijiworldNews/KP): ಕಳೆದ 10 ವರ್ಷಗಳಿಂದ ಕರಾವಳಿ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಹಾವಳಿ ವಿಪರೀತವಾಗಿದ್ದು, ಇಷ್ಟು ವರ್ಷ ಸೈಲೆಂಟ್ ಆಗಿದ್ದ ಮತ್ತಿನ ಪ್ರಪಂಚ ಕೊರೊನಾ ಲಾಕ್ಡೌನ್ ಸಮಯದಲ್ಲಿ ಬೆಳ್ಳಿತೆರೆಯ ನಟರು, ಆ್ಯಂಕರ್ಗಳು ಮತ್ತು ಇತರ ಸೆಲೆಬ್ರಿಟಿಗಳು ಈ ದಂಧೆಯಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.
ಸಾಂದರ್ಭಿಕ ಚಿತ್ರ
ಇನ್ನು ತನಿಖೆಯಲ್ಲಿ ಹಲವರನ್ನು ಬಂಧಿಸಿದ್ದು, ಬಂಧಿತ ಆರೋಪಿಗಳು ನೀಡಿದ ಮಾಹಿತಿಯ ಪ್ರಕಾರ ಪೊಲೀಸರು ಬೆಂಗಳೂರಿನಲ್ಲಿ ಕೆಲವು ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದ್ದರು.
ಹೊರ ಜಿಲ್ಲೆ ಮತ್ತು ರಾಜ್ಯಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಆರಂಭವಾದ ಡ್ರಗ್ಸ್ ಮಾಫಿಯಾ, ಇದೀಗ ಕರಾವಳಿ ಜಿಲ್ಲೆಯ ಗ್ರಾಮೀಣ ಕಾಲೇಜು ಮತ್ತು ಶಾಲಾ ಕ್ಯಾಂಪಸ್ಗಳಲ್ಲಿ ಆವರಿಸಿಕೊಂಡಿದ್ದು, ಹದಿಹರೆಯದ ಯುವಕರು ಮಾದಕ ಲೋಕದ ದಾಸರಾಗುವಂತೆ ಮಾಡಿದೆ.
ನಗರದಲ್ಲಿ ಕಳೆದ ಆರು ವರ್ಷಗಳಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ 850ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು. ಸುಮಾರು 1200 ಜನರನ್ನು ಬಂಧಿಸಿ, ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇನ್ನು ಮಂಗಳೂರು ನಗರಕ್ಕೆ ಮುಖ್ಯವಾಗಿ ನೆರೆಯ ಕೇರಳ, ಗೋವಾ ಮತ್ತು ಮಹಾರಾಷ್ಟ್ರದಿಂದ ರೈಲಿನ ಮೂಲಕ ಹಾಗೂ ಔಷಧಿಗಳನ್ನು ವೆಬ್ಸೈಟ್ಗಳು, ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ನೆಟ್ವರ್ಕ್ಗಳ ಮೂಲಕ ಗಾಂಜಾವನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸ್ ತನಿಖೆ ವೇಳೆ ತಿಳಿದುಬಂದಿತ್ತು.
ಕರಾವಳಿ ನಗರಗಳು ವೃತ್ತಿಪರ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವುದರಿಂದ, ಭಾರತದ ಇತರ ರಾಜ್ಯಗಳ ಹಾಗೂ ವಿದೇಶದ ವಿದ್ಯಾರ್ಥಿಗಳು ಬರುತ್ತಾರೆ ಇವರನ್ನೇ ಮಾದಕವಸ್ತು ವಿತರಕರು ಮುಖ್ಯ ಗ್ರಾಹಕರಾಗಿಕೊಂಡು ಮಾದಕವಸ್ತುವನ್ನು ಇಡೀ ಜಿಲ್ಲೆಗೆ ಹಬ್ಬುವಂತೆ ಮಾಡಿದ್ದಾರೆ.
ಇನ್ನು ನಗರದಲ್ಲಿ ಹೆಚ್ಚು ಚಲಾವಣೆಯಲ್ಲಿರುವ ಮಾದಕ ವಸ್ತುಗಳೆಂದರೆ ಗಾಂಜಾ, ಕೊಕೇನ್, ಚರಸ್ ಮತ್ತು ಹ್ಯಾಶಿಶ್ಗಳು ಎಂದು ಪೊಲೀಸರು ತಿಳಿಸಿದ್ದು, ಅಲ್ಲದೆ ಕಳೆದ ವರ್ಷ 1.5 ಕೋಟಿ ಮೌಲ್ಯದ ಮಾದಕವಸ್ತವನ್ನು ಜಪ್ತಿ ಮಾಡಿ ಪೊಲೀಸ್ ಇಲಾಖೆ ನಾಶಪಡಿಸಿತ್ತು.