ಕಾಸರಗೋಡು,ಡಿ 12(MSP): ವನ್ಯಜೀವಿ ಬೇಟೆಗೆ ಭಾಗಮಂಡಲ ಸಮೀಪದ ರಕ್ಷಿತಾರಣ್ಯಕ್ಕೆ ತೆರಳಿದ್ದ ಕಾಸರಗೋಡಿನ ವ್ಯಕ್ತಿಯೋರ್ವ ಗುಂಡೇಟಿಗೆ ಬಲಿಯಾದ ಘಟನೆ ನಡೆದಿದೆ. ಮೃತರನ್ನು ಚಿತ್ತಾರಿಕ್ಕಾಲ್ ನ ಜೋರ್ಜ್ ವರ್ಗಿಸ್ (48) ಎಂದು ಗುರುತಿಸಲಾಗಿದೆ.
ಜೋರ್ಜ್ ಮತ್ತು ಸ್ನೇಹಿತರಾದ ಅಶೋಕ್ , ಚಂದ್ರನ್ ಮನೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ಕರ್ನಾಟಕ ವ್ಯಾಪ್ತಿಯ ವ್ಯಾಪ್ತಿಯ ಭಾಗಮಂಡಲ ಪರಿಸರದ ವಾಗಮನ್ ಎಂಬಲ್ಲಿನ ಅರಣ್ಯಕ್ಕೆ ತೆರಳಿದ್ದು , ಈ ಸಂದರ್ಭದಲ್ಲಿ ಘಟನೆ ನಡೆದಿದೆ.
ಅರಣ್ಯಪಾಲಕರು ಗುಂಡು ಹಾರಿಸಿದ್ದಾರೆ ಅಥವಾ ಆಕಸ್ಮಿಕವಾಗಿ ತಂಡದವರಿಂದ ಗುಂಡು ಸಿಡಿದಿರಬಹುದೇ ಎಂಬ ಉಂಟಾಗಿದೆ. ಮೃತದೇಹವನ್ನು ಕರ್ನಾಟಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು , ಅಶೋಕ್ ಮತ್ತು ಚಂದ್ರನ್ ರನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಕ್ಸಲರೆಂಬ ಸಂಶಯದಿಂದ ಅರಣ್ಯ ಸಿಬಂದಿಗಳು ಈ ಪ್ರದೇಶದಲ್ಲಿ ನಿಗಾ ಇರಿಸುತ್ತಾ ಬಂದಿದ್ದಾರೆ. ತನಿಖೆ ಬಳಿಕವಷ್ಟೇ ಘಟನೆಗೆ ಕಾರಣ ತಿಳಿದು ಬರಲಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.