ನವದೆಹಲಿ,ಡಿ 12(MSP):ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ, ಕಾಂಗ್ರೆಸ್ ಗೆದ್ದು ಬೀಗಿದೆ. ಇದೇ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ನಾಯಕಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮತ್ತೆ ಪ್ರಧಾನಿ ಮೋದಿಯ ಕಾಲೆಳೆದಿದ್ದಾರೆ.
ಈ ಹಿಂದೆ ಹಲವು ಬಾರಿ ಪ್ರಧಾನಿ ಮೋದಿ ಬಗ್ಗೆ ನಿಂದನಾತ್ಮಕವಾಗಿ ಟ್ವೀಟ್ ಮಾಡಿರುವ ನಟಿ ರಮ್ಯ ಕಾಂಗ್ರೆಸ್ನ ಭರ್ಜರಿ ಜಯದ ಬಳಿಕ ’ಬಿಜೆಪಿ ಮುಕ್ತ ಭಾರತ ’ ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ.2013 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಟ್ವೀಟರ್ ನಲ್ಲಿ ಮಾಡಿದ್ದ ಟ್ವೀಟ್ ನ ಸ್ಕ್ರೀನ್ ಶಾಟ್ ತೆಗೆದು ’ಕಾಂಗ್ರೆಸ್ ಮುಕ್ತ ಭಾರತ ’ ಎಂದಿದ್ದಲ್ಲಿ ಕಾಂಗ್ರೆಸ್ ಹೆಸರನ್ನು ಅಳಿಸಿ ಕೇಸರಿ ಬಣ್ಣದಲ್ಲಿ ಬಿಜೆಪಿ ಎಂದು ಬರೆದಿದ್ದಾರೆ.
2013 ಪ್ರಧಾನಿ ಮೋದಿ ಅವರು, ಟ್ವೀಟರ್ ನಲ್ಲಿ ಐದು ರಾಜ್ಯಗಳ ಫಲಿತಾಂಶ ಪ್ರಕಟವಾಗಿದ್ದು ಬದಲಾವಣೆಯ ಗಾಳಿ ಯಾವ ಬದಿಗೆ ಬೀಸುತ್ತಿದೆ ಎಂದು ಅರ್ಥವಾಗಿದೆ. ಇದು ಕಾಂಗ್ರೆಸ್ ಮುಕ್ತ ಭಾರತದ ಆರಂಭ ಎಂದು ಟ್ವೀಟ್ ಮಾಡಿದ್ದರು. ಇದನ್ನೇ ರಮ್ಯ ತಿರುಮಂತ್ರವಾಗಿಸಿ ಪ್ರಧಾನಿಯ ಕಾಲೆಲೆದಿದ್ದಾರೆ.