ಕುಂದಾಪುರ,ಡಿ 12(MSP): ತಲ್ಲೂರು ಗ್ರಾಮದ ರಾಜಾಡಿಯ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೈವಸ್ಥಾನಕ್ಕೆ ಡಿ.10 ರ ಮಧ್ಯರಾತ್ರಿ ಒಳನುಗ್ಗಿದ ಕಳ್ಳರು, ಸುಮಾರು 2 ಲಕ್ಷ ರೂಪಾಯಿಗೂ ಮಿಕ್ಕಿದ ಬೆಳ್ಳಿಯ ಪ್ರಭಾವಳಿ ಸಹಿತ ವಿವಿಧ ನಗ -ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಡಿ.10 ರ ಮಧ್ಯರಾತ್ರಿ 12 ಗಂಟೆಯಿಂದ ಡಿ.11 ರ ಬೆಳಗ್ಗೆ5.30 ರ ಮಧ್ಯದ ಅವಧಿಯಲ್ಲಿ ಕಳ್ಳರು ದೇವಸ್ಥಾನದ ಮಹಡಿ ಮೇಲೆ ಹತ್ತಿ, ಒಳ ಪ್ರವೇಶಿಸಿದ್ದು, ನಂತರ ಗರ್ಭಗುಡಿಯ ಬಾಗಿಲಿನ ಬೀಗ ಮುರಿದಿದ್ದಾರೆ. ಕಾಣಿಕೆ ಡಬ್ಬಿಯ ಬೀಗವನ್ನು ತೆಗೆದಿದ್ದಾರೆ, ಆ ನಂತರ ಒಳಗಿನಿಂದ ಹಾಕಲಾಗಿದ್ದ ಹಿಂಬದಿಯ ಚಿಲಕ ತೆಗೆದು ದೇವಸ್ಥಾನದಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಇವರು ಮುಂಬಾಗಿಲನ್ನು ಮುಟ್ಟಿರಲಿಲ್ಲ.
ವರ್ಷದ ಹಿಂದೆ ನಡೆದ ವಾರ್ಷಿಕ್ ಅಜಾತ್ರೆಯ ವೇಳೆ ರಕ್ತೇಶ್ವರಿ ದೇವಿಗೆ ಸಮರ್ಪಿಸಲಾದ ಸುಮಾರು 2ಲಕ್ಷ ರೂ. ಮೌಲ್ಯದ 4 ಕೆ.ಜಿ ಯ ಬೃಹತ್ ಬೆಳ್ಳಿಯ ಪ್ರಭಾವಳಿ, 3 ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 10 ಸಾವಿರ ರೂ, ಸುಮಾರು 10 ಸಾವಿರ ರೂ ಮೌಲ್ಯದ 4 ಗ್ರಾಂ 1 ಚಿನ್ನದ ಕರಿಮಣಿ ಸರ , 25 ಸಾವಿರ ರೂ. ಮೌಲ್ಯದ ಸಿಸಿಟಿವಿ ಹಾಗೂ ಅದರ ಡಿವಿಆರ್ ಒತ್ಟು ಸೆರಿ ಎರದೂವರೆ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ದೋಚಿದ್ದಾರೆ.
3 ವರ್ಷದ ಹಿಂದೆ ದೇವಸ್ಥಾನದಲ್ಲಿ ಕಳ್ಳತನ ನಡೆದ ಬಳಿಕ ಇಲ್ಲಿ ಸಿಸಿಟಿವಿ ಆಳವಡಿಕೆ ಮಾಡಲಾಗಿತ್ತು. ಆದರೆ ಚಾಣಾಕ್ಷ ಕಳ್ಳರು ಸಿಸಿಟಿವಿ ಹಾಗೂ ಡಿವಿಆರ್ ಅನ್ನೇ ಹೊತ್ತೊಯ್ದಿದ್ದು ಇದರಿಂದ ಈ ಕಳ್ಳತನ ಕೃತ್ಯದ ಸಾಕ್ಷ್ಯವೂ ಸಿಗದಂತಾಗಿದೆ
ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ಬಣ್ಣ ಶೆಟ್ಟಿ ರಾಜಾಡಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಎಸ್ಐ ಹರೀಶ್ ಆರ್., ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.