ಬಜ್ಪೆ, ಡಿ 12(MSP): ಅಪರಿಚಿತ ವ್ಯಕ್ತಿಯೊಬ್ಬ ಕೈಕಂಬದ ಕಂದಾವರ ಗ್ರಾಮ ಪಂಚಾಯತಿನ ಸಹಾಯಕ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಡಿ.11 ರ ಮಂಗಳವಾರ ನಡೆದಿದೆ.
`ಆಧಾರ್ ನೋಂದಣಿ ವಿಷಯವಾಗಿ ಮಾಹಿತಿ ಪಡೆಯಲು ನಾಡಕಚೇರಿಗೆ ಆಗಮಿಸಿದ್ದ ಅಪರಿಚಿತ ವ್ಯಕ್ತಿಯು , ಆಧಾರ್ ಸಂಖ್ಯೆ ನೋಂದಣಿಗೆ ತಾಂತ್ರಿಕ ಅಡಚಣೆ ಉಂಟಾಗಿದೆ’ಎಂದ ಸಿಬ್ಬಂದಿ ಭಾಸ್ಕರ್ ಮಾತಿಂದ ಕುಪಿತನಾಗಿ ಹಲ್ಲೆ ನಡೆಸಿದ. ಕಿವಿಗೆ ಗಾಯಗೊಂಡ ಭಾಸ್ಕರ್ ಅವರನ್ನು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಧಾರ್ ನೋಂದಣಿ ಸಿಬ್ಬಂದಿ ರಜೆಯಲ್ಲಿದ್ದ ಕಾರಣ ಭಾಸ್ಕರ್ ನಾಡಕಚೇರಿಯಲ್ಲಿ ಆಧಾರ್ ಕರ್ತವ್ಯ ನಿರ್ವಹಿಸುತ್ತಿದ್ದರು.