ಕಾಸರಗೋಡು, ಫೆ 08 (DaijiworldNews/HR): ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಕಳೆದ ಎರಡು ನಾಲ್ಕೈದು ದಿನಗಳಿಂದ ಸೋಂಕಿತರ ಪ್ರಮಾಣ ಕುಸಿದಿದೆ.
ಮಂಗಳವಾರ ಜಿಲ್ಲೆಯಲ್ಲಿ 340 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 856 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 3,372 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 15,445 ಮಂದಿ ನಿಗಾ ದಲ್ಲಿದ್ದಾರೆ.
ಇನ್ನು ಇದುವರೆಗೆ ಜಿಲ್ಲೆಯಲ್ಲಿ 1,63,328 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 1,58,545 ಮಂದಿ ಗುಣಮುಖರಾಗಿ, ಒಟ್ಟು ಮೃತಪಟ್ಟವರ ಸಂಖ್ಯೆ 1,170 ಆಗಿದೆ.