ಕಾಸರಗೋಡು, ಫೆ 07 (DaijiworldNews/MS): ಮಾದಕ ವಸ್ತು ಎಂ ಡಿ ಎಂ ಎ ಸಹಿತ ಓರ್ವನನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತ ನನ್ನು ವಿದ್ಯಾನಗರ ನಾಲ್ಕನೇ ಮೈಲ್ ನ ಅಬ್ದುಲ್ ಮುನವ್ವರ್ (24) ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಎಂ ಡಿ ಎಂ ಎ ಮಾದಕ ವಸ್ತು ವಿರುದ್ದ ಪೊಲೀಸರ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಈಗಾಗಲೇ ನೂರಕ್ಕೂ ಅಧಿಕ ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.