ಕಾರ್ಕಳ, ಫೆ 05 (DaijiworldNews/HR): ಮನೆಯ ಹಾಲ್ನಲ್ಲಿ ಪೈಂಟ್ ಮಾಡಲು ಅಲ್ಯುಮೀನಿಯಂ ಏಣಿಯನ್ನು ಏರಿದ ಮಹಿಳೆಯೊಬ್ಬರು ಏಣಿಯಿಂದ ನೆಲಕ್ಕೆ ಬಿದ್ದು ಗಾಯಗೊಂಡು ಚಿಕಿತ್ಸೆ ಫಕಾರಿಯಾಗದೇ ಮೃತಪಟ್ಟಿದ್ದಾರೆ.
ನಿಟ್ಟೆ ಅಂಬಡೆಕಲ್ಲಿನ ಗಂಗಾ( 68) ಮೃತಪಟ್ಟ ಮಹಿಳೆ.
ಏಣಿಯಿಂದ ನೆಲಕ್ಕೆ ಬಿದ್ದ ಮಹಿಳೆಯಲ್ಲಿ ಮೊದಲಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅದೇ ಕಾರಣಕ್ಕಾಗಿ ಕಾರ್ಕಳದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅಲ್ಲಿಂದ ಅದೇ ದಿನ ಕಾರ್ಕಳದ ನಿಟ್ಟೆ ಗಾಜ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕರೆದುಕೊಂಡು ಹೋಗಲಾಗಿತ್ತು.
ಫೆಬ್ರವರಿ 4ರರಂದು ಮಹಿಳೆಯಯಲ್ಲಿ ನೋವು ಉಲ್ಬಣಗೊಂಡಿದ್ದರಿಂದ ಮಣಿಪಾಲ ಕೆಂ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.
ನಿಟ್ಟೆ ಲೆಮಿನಾದಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಮನೆಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದವರು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸುದಾಖಲಾಗಿದೆ.