ಕಾಸರಗೋಡು, ಫೆ 04(DaijiworldNews/KP): ಕೇರಳದಲ್ಲಿ ಸೋಂಕಿತರ ಪ್ರಮಾಣ ಹೆಚ್ಚದ ಹಿನ್ನಲೆ ಜನವರಿ 21ರಿಂದ ಶಾಲೆಗಳನ್ನು ಎರಡು ವಾರಗಳ ಕಾಲ ಮುಚ್ಚಲಾಗಿತ್ತು, ಆದರೆ ಕೊರೊನಾ ಸೋಂಕು ಇಳಿ ಮುಖವಾದ ಕಾರಣ ತಜ್ಞರ ಸಲಹೆಯಂತೆ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕೊರೋನಾ ಸೋಕಿತರ ಪ್ರಮಾಣ ಮತ್ತು ಪಾಸಿಟಿವಿಟಿ ದರ ಇಳಿಕೆಯಾದ ಹಿನ್ನಲೆ ಸರ್ಕಾರದ ಮಾರ್ಗಸೂಚಿಯಂತೆ ಎಸ್ಎಲ್ಸಿ ಹಾಗೂ ಕಾಲೇಜುಗಳ ಭೌತಿಕ ಪಾಠವನ್ನು ಫೆಬ್ರವರಿ 7ರಿಂದ ಹಾಗೂ ಒಂದರಿಂದ ಒಂಬತ್ತನೇವರೆಗಿನ ಭೌತಿಕ ತರಗತಿಯನ್ನು ಫೆಬ್ರವರಿ 14 ರಿಂದ ಪುನರಾರಂಭಿಸಲು ನಿರ್ಧಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಎಲ್ಲ ಆರಾಧನಾಲಯಗಳ ನಿರ್ಬಂಧ ಸಡಿಲಗೊಳಿಸಿದ್ದು, ಆದರೆ, ಒಂದು ಬಾರಿ ಕೇವಲ 20 ಮಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ, ಅಲ್ಲದೇ ವಾರಾಂತ್ಯದ ನಿರ್ಬಂಧವನ್ನು ಮುಂದುವರೆಸುವುದಾಗಿ ರಾಜ್ಯ ಸರ್ಕಾರದ ನಿರ್ದೇಶನದಲ್ಲಿ ತಿಳಿಸಿದೆ.