ಮಂಗಳೂರು, ಫೆ 04(DaijiworldNews/MS): ಕಸ್ತೂರಿ ಮಾತ್ರೆ ಮಾರಾಟ ಮಾಡುತ್ತ ಬಂದ ವ್ಯಕ್ತಿಯೊಬ್ಬ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ನಗರದ ಕೊಳಂಬೆ ಗ್ರಾಮದ ಕಜೆಕೋಡಿ ಹೌಸ್ ಬಳಿ ಫೆ.03ರ ಗುರುವಾರ ನಡೆದಿದೆ.
ಆರೋಪಿಯನ್ನು ಮುಲ್ಕಿ ಕೆಂಚನಕೆರೆ ನಿವಾಸಿ ಮೊಹಮ್ಮದ್ ಇಕ್ಬಾಲ್ (52) ಎಂದು ಗುರುತಿಸಲಾಗಿದೆ.
ಕಜೆಕೋಡಿ ಹೌಸ್ ಎಂಬಲ್ಲಿ ಬೆಳಿಗ್ಗೆ 11ಗಂಟೆಗೆ ಕಸ್ತೂರಿ ಮಾತ್ರೆ ಗಳನ್ನು ಮಾರಾಟ ಮಾಡಲು ಬಂದ ಮೊಹಮ್ಮದ್ ಇಕ್ಬಾಲ್ ಮಹಿಳೆಯ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.