ಮಂಗಳೂರು, ಫೆ. 03 (DaijiworldNews/SM): ಇಲ್ಲಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ನಡೆದಿದ್ದು, ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಲಾಗಿದೆ.
ಕಂದಾವರ ಗ್ರಾಮ ಪಂಚಾಯತ್ ನ ಕಜೆಪದವು ಎಂಬಲ್ಲಿ ಘಟನೆ ನಡೆದಿದೆ. ಮೊಹಮ್ಮದ್ ಇಕ್ಬಾಲ್ ಕೆಂಚನಕೆರೆ ಆರೋಪಿಯಾಗಿದ್ದಾನೆ. ಓಮಸತ್ವ ಮಾರುವ ನೆಪದಲ್ಲಿ ಮನೆಯಲ್ಲಿ ಒಂಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಆರೋಪಿ ಯತ್ನಿಸಿದ್ದ ಎಂದು ತಿಳಿದುಬಂದಿದೆ.
ಸ್ಥಳೀಯರು ಈತನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.