ಕಾಸರಗೋಡು, ಫೆ. 03 (DaijiworldNews/SM): ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನಗರದ ನೆಲ್ಲಿಕುಂಜೆಯಲ್ಲಿ ನಡೆದಿದೆ.
ನೆಲ್ಲಿಕುಂಜೆಯ ವಿನೋದ್(32) ಮೃತ ಪಟ್ಟವರು. ಗುರುವಾರ ಬೆಳಿಗ್ಗೆ ಮನೆಯಿಂದ ನೂರು ಮೀಟರ್ ದೂರದ ಬಾವಿಯಲ್ಲಿ ಮೃತ ದೇಹ ಪತ್ತೆ ಯಾಗಿದೆ. ಮಾಹಿತಿ ತಿಳಿದ ಕಾಸರಗೋಡು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದ್ದರು.
ತೆರುವತ್ ನ ವೆಲ್ಡಿಂಗ್ ಅಂಗಡಿಯಲ್ಲಿ ಕಾರ್ಮಿಕ ನಾಗಿದ್ದರು. ವಿನೋದ್ ನಾಪತ್ತೆಯಾದ ಬಗ್ಗೆ ಮನೆಯವರು ಕಾಸರಗೋಡು ನಗರ ಪೊಲೀಸರಿಗೆ ದೂರು ನೀಡಿದ್ದರು.